ಶನಿವಾರಸಂತೆ, ಜೂ. ೯: ಶನಿವಾರಸಂತೆ ವಲಯ ಅರಣ್ಯ ಇಲಾಖೆಯಲ್ಲಿ ಕಾಫಿ ಬೆಳೆಗಾರರಿಗೆ ಹಾಗೂ ಇತರೆ ಬೆಳೆಗಾರರಿಗೆ ಲಾಭ ತಂದುಕೊಡುವ ಮತ್ತು ಜಮೀನಿನ ಗುಣಮಟ್ಟ ಕಾಯ್ದುಕೊಳ್ಳುವ ನಾಟ (ಟಿಂಬರ್) ಸಸಿಗಳಾದ ತೇಗ, ಬಳಂಜಿ, ಸಿಲ್ವರ್, ಮಹಾಗನಿ, ಬಾಗೇ, ಹೊಳೆಮತ್ತಿ, ಕಾಡುಹಣ್ಣುಗಳಾದ ಪನ್ನೆರಳು, ನೆಲ್ಲಿ, ಮಾವು, ವಾಣಿಜ್ಯ ಬೆಳೆಗಳಾದ ಸೀಬೆ, ನೇರಳೆ, ಹಲಸು, ಇತರೆ ಸಸಿಗಳಾದ ದಾಲ್ಚಿನ್ನಿ, ಬಿದಿರು ಸಸಿಗಳು ಲಭ್ಯವಿವೆ ಎಂದು ವಲಯ ಅರಣ್ಯಾಧಿಕಾರಿ ಡಿ.ವಿ. ಪೂಜಾಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ರಿಯಾಯಿತಿ ದರದಂತೆ ಅತ್ಯಂತ ಕನಿಷ್ಟ ಬೆಲೆಯಲ್ಲಿ ೬೯ ಸಸಿಯೊಂದಕ್ಕೆ ರೂ.೩ ಹಾಗೂ ೮*೧೨ ಸಸಿ ಯೊಂದಕ್ಕೆ ರೂ. ೬ಕ್ಕೆ ಸಸಿಗಳು ಶನಿವಾರಸಂತೆ ಅರಣ್ಯ ಸಸ್ಯ ಕ್ಷೇತ್ರದಲ್ಲಿ ಲಭ್ಯವಿದೆ. ಕೃಷಿಕರು ಪ್ರಯೋಜನ ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿ ಗಾಗಿ ಉಪ ವಲಯ ಅರಣ್ಯಾ ಧಿಕಾರಿ ಜಿ.ವಿಕ್ರಮ್, ಮೊ.ನಂ. ೯೫೯೧೭೩೯೬೫೪ ಸಂಪರ್ಕಿಸಬಹುದು ಎಂದು ಅಧಿಕಾರಿ ಪೂಜಾಶ್ರೀ ತಿಳಿಸಿದ್ದಾರೆ.