ಮಡಿಕೇರಿ, ಜೂ.೯: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಮಡಿಕೇರಿ ತಾಲೂಕು ಮಟ್ಟದ ತ್ರೆöÊಮಾಸಿಕ ಕೆ.ಡಿ.ಪಿ. ಸಮಿತಿಗೆ ಆರು ಸದಸ್ಯರುಗಳನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಶಿಫಾರಸ್ಸಿನ ಮೇರೆಗೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಮಕ್ಕಂದೂರು ಗ್ರಾಮದ ಕನ್ನಿಕಂಡ ಶ್ಯಾಮ್, ನಾಪೋಕ್ಲು ಕೊಳಕೇರಿ ಗ್ರಾಮದ ಕಲಿಯಂಡ ಕುಶಾಲಪ್ಪ, ಭಾಗಮಂಡಲ ತಣ್ಣಿಮಾನಿಯ ತಿಲಕ್ ಸುಬ್ರಾಯ, ಯವಕಪಾಡಿಯ ಎ.ಎ. ರೈನಾ ಕಾರ್ಯಪ್ಪ ಹಾಗೂ ಕರಿಕೆ ಗ್ರಾಮದ ಎ.ಎಂ. ಜಯನ್ ಅವರನ್ನು ನೇಮಕ ಮಾಡಲಾಗಿದೆ.