ಚೆಯ್ಯAಡಾಣೆ, ಜೂ. ೯: ಕಕ್ಕಬೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ನೆಲಜಿ ಗ್ರಾಮದಿಂದ ಕಕ್ಕಬ್ಬೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವುದು ಸ್ಥಳೀಯ ಕಣ್ಣಿಗೆ ಬಿದ್ದಿದೆ. ಹಾಡಹಗಲೇ ಕಾಡಾನೆಗಳನ್ನು ಕಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ನೆಲಜಿ ಗ್ರಾಮದ ತೋಟಗಳಿಗೆ ಕಾಡಾನೆಗಳು ಲಗ್ಗೆಯಿಟ್ಟಿದ್ದು ಫಸಲನ್ನು ಹಾನಿಪಡಿಸಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾಗಮಂಡಲ ಕಕ್ಕಬ್ಬೆ ಉಪವಲಯ ಅರಣ್ಯಾಧಿಕಾರಿ ಕಾಳೆಗೌಡ, ಗಸ್ತು ಅರಣ್ಯ ಪಾಲಕ ಶರತ್, ಅರಣ್ಯ ವೀಕ್ಷಕ ಸಚಿನ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.