ನಾಪೋಕ್ಲು, ಜೂ. ೮: ಜಿಲ್ಲಾ ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿ ನಾಪೋಕ್ಲು ಲಯನ್ಸ್ ಕ್ಲಬ್ನ ಡಾ. ಕೋಟೆರ ಸಿ. ಪಂಚಮ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಲಯನ್ಸ್ ಕ್ಲಬ್ನ ವತಿಯಿಂದ ನಟರಾಜ ಕೆಸ್ತೂರ್, ಗೋಣಿಕೊಪ್ಪ ಲಯನ್ಸ್ ಕ್ಲಬ್ನ ಚಿಟ್ಟಿಮಾಡ ಅಪ್ಪಣ್ಣ, ಮೂರ್ನಾಡು ಲಯನ್ಸ್ ಕ್ಲಬ್ನ ಬಡುವಂಡ ಬಿಂದು ಗಣಪತಿ ವಲಯ ಅಧ್ಯಕ್ಷರುಗಳಾಗಿ ಆಯ್ಕೆಯಾಗಿದ್ದಾರೆ. ಇವರು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.