ಸೋಮವಾರಪೇಟೆ, ಜೂ. ೮: ಇಲ್ಲಿನ ಚೌಡೇಶ್ವರಿ ಬ್ಲಾಕ್ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಪೂರ್ವ ಪ್ರಾಥಮಿಕ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಯಿತು.
ಕೇAದ್ರಕ್ಕೆ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್ ಚಾಲನೆ ನೀಡಿದರು. ನಂತರ ಮಾತನಾಡಿ, ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳಿಂದಲೇ ವಿದ್ಯಾಭ್ಯಾಸವನ್ನು ಪ್ರಾರಂಭ ಮಾಡುತ್ತಿದ್ದಾರೆ. ಇದರೊಂದಿಗೆ ಸರ್ಕಾರ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಪ್ರಾರಂಭಿಸಿರುವುದು ಮಕ್ಕಳಿಗೆ ಪ್ರಾರಂಭದ ಶಿಕ್ಷಣ ನೀಡಲು ಅವಕಾಶವಾಗಿದೆ. ಶಿಕ್ಷಣದೊಂದಿಗೆ ಮಕ್ಕಳಿಗೆ ಪೌಷ್ಠಿಕ ಆಹಾರವನ್ನೂ ನೀಡಲಾಗುತ್ತಿದೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯಲು ಪೋಷಕರು ಮುಂದಾಗಬೇಕು ಎಂದರು. ತರಗತಿಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೂ, ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಇಲಾಖೆಯಿಂದ ಸ್ಮಾರ್ಟ್ ಟಿವಿಯನ್ನು ನೀಡಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಶುಭಕರ್, ಆರೋಗ್ಯ ಕಾರ್ಯಕರ್ತೆ ಬಿ.ಎಂ. ಅನಿತಾ ಮತ್ತು ಲತಾ, ಜೇಸೀ ಮಾಜಿ ಅಧ್ಯಕ್ಷೆ ಎಂ.ಎ. ರುಬೀನಾ, ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ಸುಹಾಸ್, ಟೌನ್ ವ್ಯಾಪ್ತಿಯ ಕಾರ್ಯಕರ್ತೆಯರಾದ ಎಚ್.ಪಿ. ಅಶ್ವಿನಿ, ತಾರಾ ಲೋಬೋ, ಜಗದಾಂಬ, ಉಷಾ, ಸಹಾಯಕಿಯರಾದ ಸಿ.ಆರ್. ಕುಸುಮಾ, ಲತಾ ಇದ್ದರು.