ಕೂಡಿಗೆ, ಮೇ ೨೮ : ಕ್ರೀಡೆ ಅಂದರೆ ಕೊಡಗು., ಕೊಡಗು ಅಂದರೆ ಕ್ರೀಡೆ ಎಂಬ ಮಾತಿದೆ., ಅದರಲ್ಲೂ ಹಾಕಿ ಎಂದರೆ ಅದು ಕೊಡಗಿನ ಆಟವೆಂಬAತಾಗಿದೆ. ಇಲ್ಲಿನ ಜನರ ಉಸಿರಿನಲ್ಲಿಯೇ ಹಾಕಿ ಬೆರೆತು ಹೋಗಿದೆ. ಇದಕ್ಕೆ ಉದಾಹರಣೆ ಎಂಬAತೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿರುವುದಾಗಿದೆ. ಕ್ರೀಡೆ., ಅದರಲ್ಲೂ ಹಾಕಿಯತ್ತ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೆ ಪೂರಕವೆಂಬAತೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಕೂಡ ಕ್ರೀಡಾ ಇಲಾಖೆ ಮೂಲಕ ಕ್ರೀಡಾ ವಸತಿ ನಿಲಯಗಳನ್ನು ಸ್ಥಾಪಿಸಿ ಬಾಲಕ, ಬಾಲಕಿಯರನ್ನು ನೇಮಿಸಿಕೊಂಡು ತರಬೇತಿ ನೀಡಿ ಆಟಗಾರರನ್ನಾಗಿ ರೂಪಿಸುತ್ತಿದೆ. ಆದರೆ, ಕೆಲವರ ತಾತ್ಸಾರ ಮನೋಭಾವನೆಯಿಂದಾಗಿ ಕ್ರೀಡಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇಂತಹ ಒಂದು ಪ್ರಸಂಗ ಬೆಂಗಳೂರಿನ ಕ್ರೀಡಾ ವಸತಿ ನಿಲಯದಲ್ಲಾಗಿದೆ..!

ಆಟದಲ್ಲಿ ಸಾಧನೆ ತೋರಲಿಲ್ಲವೆಂಬ ಕಾರಣಕ್ಕೆ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದ ೩೧ಕ್ಕೂ ಹೆಚ್ಚು ಮಕ್ಕಳನ್ನು ಕ್ರೀಡಾ ವಸತಿ ನಿಲಯದಿಂದ ಹೊರ ಹಾಕಿರುವ ಘಟನೆ ನಡೆದಿದೆ. ಈ ಪೈಕಿ ಕ್ರೀಡಾ ಕ್ಷೇತ್ರವನ್ನರಸಿ ಕ್ರೀಡಾ ವಸತಿ ನಿಲಯಕ್ಕೆ ಸೇರ್ಪಡೆಗೊಂಡಿರುವ ಕ್ರೀಡೆಯ ತವರೂರು ಎಂದೇ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ೨೩ಮಕ್ಕಳು ಸೇರಿದ್ದು, ಇದೀಗ ಮಕ್ಕಳ ಮುಂದಿನ ಭವಿಷ್ಯ ಅತಂತ್ರವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಬೆಂಗಳೂರಿನ ಶಾಂತಿನಗರದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಪದವಿ ಪೂರ್ವ ವಿಭಾಗದಿಂದ ಕ್ರೀಡಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಶಾಸಕರು ನ್ಯಾಯ ಒದಗಿಸಿಕೊಡಿ

ಕ್ರೀಡಾ ವಸತಿ ನಿಲಯಕ್ಕೆ ಸೇರ್ಪಡೆಗೊಳ್ಳುವವರ ಪೈಕಿ ಬಹುತೇಕ ಮಂದಿ ಬಡ ಹಾಗೂ ಮಧ್ಯಮ ವರ್ಗದವರಾಗಿರುತ್ತಾರೆ. ಸರಕಾರದಿಂದ ಕ್ರೀಡಾ ನಿಲಯದ ಮೂಲಕ ಸಿಗುವ ಸವಲತ್ತು ಹಾಗೂ ಪ್ರೋತ್ಸಾಹದೊಂದಿಗೆ ಕ್ರೀಡೆ ಹಾಗೂ ಶಿಕ್ಷಣದಲ್ಲೂ ಮುಂದುವರೆಸಿಕೊAಡು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆಂಬ ಭರವಸೆಯೊಂದಿಗೆ ಮಕ್ಕಳ ಪೋಷಕರು ಕ್ರೀಡಾ ವಸತಿ ನಿಲಯಕ್ಕೆ ಸೇರಿಸುತ್ತಾರೆ. ಏನೂ ಸಾಧನೆ ಇಲ್ಲದವರನ್ನೇನೂ ವಸತಿ ನಿಲಯಕ್ಕೆ ಸೇರಿಸಿಕೊಳ್ಳುವುದಿಲ್ಲ. ಹಾಗಿದ್ದ ಮೇಲೆ ಇದೀಗ ದಿಢೀರನೇ ಹೊರ ಹಾಕಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದರಿಂದ ಅವರ ಭವಿಷ್ಯ ಹಾಳಾಗುವದಲ್ಲದೆ, ಪೋಷಕರಿಗೂ ಆತಂಕ. ಹಾಗಾಗಿ ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಶಾಸಕರು ಸಂಬAಧಿಸಿದ ಇಲಾಖೆಯ ಸಚಿವರು, ಆಯುಕ್ತರ ಗಮನಕ್ಕೆ ತಂದು ಜಿಲ್ಲೆಯ ಮಕ್ಕಳಿಗೆ ನೆರವಾಗಿ ನ್ಯಾಯ ಒದಗಿಸಿಕೊಡುವಂತೆ ನೊಂದ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

(ಮೊದಲ ಪುಟದಿಂದ) ಆರನೇ ತರಗತಿಯಿಂದಲೇ ಹತ್ತನೇ ತರಗತಿವರೆಗೆ ರಾಜ್ಯದ ವಿವಿಧೆಡೆ ತರಬೇತಿ ಪಡೆದು ರಾಜ್ಯ, ರಾಷ್ಟçಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾರ್ಥಿಗಳಿಗೆ ಪ್ರಥಮ ಆದ್ಯತೆಯೊಂದಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರತಿವರ್ಷ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನಂತರದಲ್ಲಿ ಕ್ರೀಡಾರ್ಥಿಗಳು ಉತ್ತೀರ್ಣರಾದ ಬಳಿಕ ಪದವಿ ಮಟ್ಟದ ನಿಲಯಕ್ಕೆ ಅರ್ಹತೆ ಪಡೆಯುತ್ತಾರೆ. ಪದವಿ ಪೂರ್ವ ಹಂತಕ್ಕೆ ಸೇರ್ಪಡೆಯಾದ ಬಳಿಕ ಅಲ್ಲಿಯೇ ಯಾವದಾದರೂ ಕಾಲೇಜುಗಳಿಗೆ ಸೇರ್ಪಡೆಗೊಂಡು ಶಿಕ್ಷಣ ಪಡೆಯುತ್ತಾರೆ. ಕ್ರೀಡಾ ನಿಲಯದೊಂದಿಗೆ ವಿಲೀನಗೊಂಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ. ಹಾಗಾಗಿ ಬಡ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕ್ರೀಡಾ ನಿಲಯದಲ್ಲಿದ್ದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರಿಸಿಕೊAಡು ಕ್ರೀಡೆಯಲ್ಲಿಯೂ ತರಬೇತಿ ಪಡೆಯುತ್ತಾ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.

ಅರ್ಧದಲ್ಲಿ ಕೊಕ್..!

ಬೆಂಗಳೂರಿನ ಕ್ರೀಡಾ ನಿಲಯದಲ್ಲಿ ಪ.ಪೂ, ಪದವಿ ಸೇರಿದಂತೆ ನೂರಕ್ಕೂ ಅಧಿಕ ಕ್ರೀಡಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ಇದೀಗ ಅಲ್ಲಿನ ತರಬೇತುದಾರರು ಯಾವದೇ ಮುನ್ಸೂಚನೆಯೂ ನೀಡದೆ ಸುಮಾರು ಮೂವತ್ತೊಂದು ಮಂದಿಯನ್ನು ಹೊರ ಹಾಕಿದ್ದಾರೆ. ಈ ಪೈಕಿ ಕೊಡಗು ಜಿಲ್ಲೆಯಿಂದ ಆಯ್ಕೆಯಾಗಿ ಹೋಗಿದ್ದ ೨೩ ಕ್ರೀಡಾರ್ಥಿಗಳನ್ನು ಹೊರ ಹಾಕಲಾಗಿದೆ. ಅದರಲ್ಲೂ ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಾಗಿದ್ದು, ಇನ್ನೂ ಕೂಡ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದ್ದು, ನಿಲಯದಿಂದ ಹೊರ ಹಾಕಿರುವದರಿಂದ ಇದೀಗ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುವದೆಂಬ ಚಿಂತೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮುಳುಗಿದ್ದಾರೆ.

ಯಾವ ಕಾಲೇಜು..?

ದಿಢೀರನೇ ಅರ್ಧದಲ್ಲಿ ನಿಲಯದಿಂದ ಹೊರ ಹಾಕಿರುವದರಿಂದ ಇದೀಗ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಇಲ್ಲಿಂದ ಹೋಗಿ ಅಲ್ಲಿ ವಸತಿ ನಿಲಯದಲ್ಲಿದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದವರಿಗೆ ಸಂಕಷ್ಟ ಎದುರಾಗಿದೆ. ಶಿಕ್ಷಣ ಮುಂದುವರೆಸಲು ಬೇರೆ ವಸತಿ ನಿಲಯ, ಬಾಡಿಗೆ ಕೊಠಡಿ ಅಥವಾ ಪಿಜಿಗಳನ್ನು ಅವಲಂಭಿಸಬೇಕಾಗಿದೆ. ಆದರೆ, ಬೆಂಗಳೂರಿನAತಹ ಮಹಾನಗರದಲ್ಲಿ ಅಷ್ಟು ಸುಲಭದಲ್ಲಿ ವಸತಿ ವ್ಯವಸ್ಥೆ ಲಭಿಸುವದು ಕನಸಿನ ಮಾತಾಗಿದೆ. ಸಿಕ್ಕಿದರೂ ದುಬಾರಿಯಾಗಿರುತ್ತವೆ. ಅದರಲ್ಲೂ ಬಡವರ್ಗದ ಜನರ ಮಕ್ಕಳಿಗಂತೂ ದುಬಾರಿ ದರ ತೆತ್ತು ಬಾಡಿಗೆ ಕೊಠಡಿ ಪಡೆಯುವದು ಅಸಾಧ್ಯದ ಮಾತು. ಜೊತೆಗೆ ಊಟೋಪಚಾರಕ್ಕೂ ವ್ಯವಸ್ಥೆ ಮಾಡಿಕೊಳ್ಳಬೇಕಾದಂತಹ ಪರಿಸ್ಥಿತಿ ಕೂಡ ತಲೆದೋರುತ್ತದೆ. ಹಾಗಾಗಿ ಇದೀಗ ಈ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಲ್ಲಿ ಮಾತ್ರ ೪೪..!

ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾದ ಬಳಿಕ ಪ್ರಾಥಮಿಕ ಹಂತದಲ್ಲಿ ಏನೂ ಬೆಳವಣಿಗೆ ಕಾಣದೆ, ಸಾಧನೆ ಮಾಡದವರನ್ನು ಹೊರ ಹಾಕುವದು(ವೀಡ್ ಔಟ್) ಮಾಡುವ ನಿಯಮವಿದೆ. ಅದೂ ಕೂಡ ತೀರಾ ಏನೇನೂ ಬೆಳವಣಿಗೆ, ಸಾಧನೆ ಇಲ್ಲದ ಕೆಲವರನ್ನು ಮಾತ್ರ ಮಾಡಬಹುದಾಗಿದೆ. ಆದರೆ, ಪ್ರೌಢ ಹಂತದಲ್ಲಿ ರಾಜ್ಯ, ರಾಷ್ಟç ಮಟ್ಟದಲ್ಲಿ ಸಾಧನೆ ಮಾಡಿ ಪದವಿ ಪೂರ್ವ, ನಂತರ ಪದವಿ ಹಂತಕ್ಕೆ ತಲಪಿದ ಮೇಲೆ ಹೊರಹಾಕುವದರಿಂದ ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೊರಹಾಕಲಾಗಿರುವ ಕ್ರೀಡಾರ್ಥಿಗಳ ಒಟ್ಟು ಸಂಖ್ಯೆ ೪೪. ಈ ಪೈಕಿ ಬೆಂಗಳೂರು ನಿಲಯದಿಂದ ಹೊರ ಹಾಕಲ್ಪಟ್ಟವರು ಬರೋಬ್ಬರಿ ೩೧..! ಅದರಲ್ಲೂ ಕೊಡಗು ಜಿಲ್ಲೆಯವರು ೨೩..! ಒಂದೇ ಬಾರಿಗೆ ೨೩ ಮಕ್ಕಳನ್ನು ಹೊರಹಾಕುವದಾದರೆ ಅವರಲ್ಲಿ ಏನೂ ಸಾಧನೆ ಇಲ್ಲವೇ..? ಹಾಗಿದ್ದ ಮೇಲೆ ಪ.ಪೂ ಹಂತದಲ್ಲಿ ಆಯ್ಕೆ ಮಾಡಿಕೊಂಡಿದ್ದಾದರೂ ಏಕೇ..? ಎಂಬದು ಆ ಮಕ್ಕಳ ಪೋಷಕರ ಪ್ರಶ್ನೆಯಾಗಿದೆ..?

ತರಬೇತುದಾರರ ಈ ರೀತಿಯ ಧೋರಣೆಯಿಂದಾಗಿ ಇದೀಗ ಮಕ್ಕಳ ಭವಿಷ್ಯ ಕುಂಠಿತವಾಗಲಿದ್ದು, ಬಹುತೇಕ ಮಕ್ಕಳ ಶಿಕ್ಷÀಣಕ್ಕೂ ತೊಂದರೆಯಾಗಲಿದೆ. ಈ ರೀತಿಯ ಧೋರಣೆ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕ್ರೀಡಾಜಿಲ್ಲೆಯೆಂದು ಕೀರ್ತಿವೆತ್ತಿರುವ ಕೊಡಗು ಜಿಲ್ಲೆಯಿಂದ ಕ್ರೀಡಾನಿಲಯಕ್ಕೆ ಸೇರ್ಪಡೆಗೊಳ್ಳುವ ಮಕ್ಕಳ ಸಂಖ್ಯೆ ಕ್ಷೀಣವಾದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗಿರುವದು ಇಲ್ಲಿ ಗಮನಾರ್ಹ. ಹಾಗಾಗಿ ಸಂಬAಧಿಸಿದ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವಂತೆ ಪೋಷಕರ, ಕ್ರೀಡಾಪ್ರೇಮಿಗಳ ಕೋರಿಕೆಯಾಗಿದೆ. -ಕೆ.ಕೆ.ನಾಗರಾಜಶೆಟ್ಟಿ