*ಗೋಣಿಕೊಪ್ಪ, ಮೇ ೨೮: ಕೊಡವ ತಕ್ಕ್ ಎಳ್ತ್ಕಾರಡ ಕೂಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಆಶ್ರಯದಲ್ಲಿ ತಾ. ೩೧ ರಂದು ಪೂರ್ವಾಹ್ನ ೧೦ ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯಲ್ಲಿ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ ೧೯೦ನೇ ಹೆಜ್ಜೆಯ ಪುಸ್ತಕ, ೧೭ ಲೇಖಕರು ಬರೆದ ೧೯೧ನೇ ಹೆಜ್ಜೆಯ ಪುಸ್ತಕ ಹಾಗೂ ಲೇಖಕಿ ಕೊಟ್ಟಂಗಡ ಕವಿತ ವಾಸುದೇವ ಬರೆದ ೧೯೨ನೇ ಹೆಜ್ಜೆಯ ನೂತನ ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ.
ಜತೆಗೆ ಸಾಹಿತಿ ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊಡವ ಭಾಷೆಯ ಹಾಡುಗಾರಿಕೆ, ಓದುವುದು ಮತ್ತು ಹಾಸ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಮಂಡೇಪAಡ ಸುಗುಣ ಮುತ್ತಣ್ಣ, ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಪ್ಪ, ಪುಸ್ತಕ ಪ್ರಕಟಣೆಯ ಪ್ರಾಯೋಜಕಿ ಕೈಬಿಲೀರ ಪಾರ್ವತಿ ಬೋಪಯ್ಯ, ಮೇಚಮಡ ಮಲ್ಲಿಗೆ ಪೂವಮ್ಮ, ಮುದ್ದಿಯಡ ಪದ್ಮ ಕುಶಾಲಪ್ಪ, ಚಿಂಡಮಾಡ ಸರಿತ ಅಶೋಕ್, ಲೇಖಕಿಯರಾದ ಉಳುವಂಗಡ ಕಾವೇರಿ ಉದಯ ಹಾಗೂ ಕೊಟ್ಟಂಗಡ ಕವಿತ ಬೋಜಮ್ಮ ಭಾಗವಹಿಸಲಿದ್ದಾರೆ.