ಕೂಡಿಗೆ, ಮೇ ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎರಡನೇ ವಾರ್ಡ್ನ ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿರುವ ಕಾಮಗಾರಿಯನ್ನು ಸದಸ್ಯ ಕೆ.ಬಿ. ಷಂಶುದ್ದೀನ್ ಹಾಗೂ ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರು ಪರಿಶೀಲನೆ ನಡೆಸಿದರು.

ವಿನಾಯಕ ಬಡಾವಣೆ ರಸ್ತೆ ತಲಾ ೩.೫೦ ಲಕ್ಷ ವೆಚ್ಚದಲ್ಲಿ ಹಾಗೂ ಬಸವೇಶ್ವರ ಬಡಾವಣೆಯ ಕಾಂಕ್ರೀಟ್ ರಸ್ತೆ ರೂ. ೩ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಬಿಲ್‌ಕಲೆಕ್ಟರ್ ಅವಿನಾಶ್, ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯ ಗ್ರಾಮಸ್ಥರು ಇದ್ದರು.