ಸುಂಟಿಕೊಪ್ಪ, ಮೇ ೨೩: ಒಂಟಿ ಸಲಗ ರಾಜಾರೋಷವಾಗಿ ಸಂಚರಿಸಿ ಜನರಲ್ಲಿ ಭೀತಿ ಉಂಟುಮಾಡಿದೆ. ೭ನೇ ಹೊಸಕೋಟೆಯ ಮೆಟ್ನಿಲ್ಲ, ಅಂದಗೋವೆ ಪೈಸಾರಿ ರಸ್ತೆಯಲ್ಲಿ ಕಳೆದ ೧ ವಾರದಿಂದ ಒಂಟಿ ಸಲಗ ಬೆಳಗ್ಗಿನ ಜಾವ ೬.೩೦ ಗಂಟೆಗೆ ಸಂಜೆ ೬ ಗಂಟೆಯ ನಂತರ ರಸ್ತೆಯಲ್ಲಿ ಸಂಚರಿಸಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೂ, ವಾಹನ ಸವಾರರಿಗೆ ಭಯ ಉಂಟುಮಾಡುತ್ತಿದೆ.

ಮನೆಯ ಮುಂದೆ ನಿಂತು ಘೀಳಿಡುತ್ತಿವೆ. ಈ ಕುರಿತು ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.