ಸುಂಟಿಕೊಪ್ಪ, ಮೇ ೨೨: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಡಿ. ಶಿವಪ್ಪ ಸ್ಮಾರಕ ೨೬ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ೬ನೇ ದಿನವಾದ ಗುರುವಾರÀದಂದು ಟಿಡಿಎಲ್ ಎಫ್.ಸಿ ಬೈಲುಕೊಪ್ಪ, ವಾಲ್ಪರಿ ಎಫ್.ಸಿ ತಮಿಳುನಾಡು, ಕ್ಯಾಲಿಕೆಟ್ ಎಫ್.ಸಿ. ಹಾಗೂ ಟ್ರೆಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದವು.
ವಾಲ್ಪರಿ ಎಫ್.ಸಿ ತಮಿಳುನಾಡು ಹಾಗೂ ಮೊಗ್ರೆಲ್ ಎಫ್.ಸಿ ಕುಂಬ್ಳೆ ನಡುವಿನ ಹೋರಾಟದಲ್ಲಿ ೫-೧ ಗೋಲುಗಳಿಂದ ವಾಲ್ಪರಿ ಎಫ್.ಸಿ ತಮಿಳುನಾಡು ಜಯ ಪಡೆಯಿತು.
ಟ್ರೆಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ಹಾಗೂ ಅಶೋಕ ಎಫ್.ಸಿ ನಡುವಿನ ಪಂದ್ಯದಲ್ಲಿ ೪-೨ ಗೋಲುಗಳಿಂದ ಟ್ರೆಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ಜಯಗಳಿಸಿತು. ಬ್ಲೂ ಮೌಂಟೆನ್ ಊಟಿ ತಂಡದ ಗೈರಿನ ಹಿನ್ನೆಲೆಯಲ್ಲಿ ಕ್ಯಾಲಿಕೆಟ್ ಎಫ್.ಸಿ. ಕ್ಯಾಲಿಕೆಟ್ ಮುಂದಿನ ಸುತ್ತು ಪ್ರವೇಶಿಸಿತು.
ಯಂಗ್ ವಾರಿರ್ಸ್ ಎಫ್.ಸಿ. ಕೆಜಿಎಫ್ ವಾಕ್ ಓವರ್ ಹಿನ್ನೆಲೆ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ಮುಂದಿನ ಹಂತ ಪ್ರವೇಶಿಸಿತು.