ಸಿದ್ದಾಪುರ, ಮೇ ೨೨: ಮನೆ ಮುಂಭಾಗದಲ್ಲಿ ನಿಲ್ಲಿ ಸಿದ್ದ ಬೈಕನ್ನು ತಡ ರಾತ್ರಿ ಕಳ್ಳರು ಕಳ್ಳತನ ಮಾಡಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಗ - ಬಾಣಂಗಾಲ ಗ್ರಾಮದ ಹುಂಡಿ ನಿವಾಸಿ ಕಿರಣ್ ಎಂಬವರಿಗೆ ಸೇರಿದ ಬಜಾಜ್ ಕ್ಯಾಲಿಬರ್ ಬೈಕ್ (ಕೆ.ಎ.೧೨ ಹೆಚ್.೧೦೩೯) ಬೈಕನ್ನು ರಾತ್ರಿ ಸಮಯದಲ್ಲಿ ತಮ್ಮ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬೆಳಗ್ಗಿನ ಜಾವ ಬೈಕ್ ಇಟ್ಟ ಸ್ಥಳದಲ್ಲಿ ಕಾಣೆಯಾಗಿರುತ್ತದೆ. ಈ ಬಗ್ಗೆ ಕಿರಣ್ ಅವರ ಸಂಬAಧಿ ಕಾವ್ಯ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಸಿಸಿ ಕ್ಯಾಮರಗಳನ್ನು ಪರಿಶೀಲನೆ ಮಾಡಿದರು. ಆದರೆ ಕಳ್ಳತನ ಆಗಿರುವ ಬೈಕ್ನ ಸುಳಿವು ಲಭಿಸಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.v