ಕುಶಾಲನಗರ, ಮೇ ೨೧: ವ್ಯಕ್ತಿಯೊಬ್ಬ ಮನೆಯಲ್ಲಿಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ಕುಶಾಲನಗರದ ನೆಹರು ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರದ ಟ್ಯಾಕ್ಸಿ ಚಾಲಕ ಸುರೇಶ್ (೪೮) ಮೃತಪಟ್ಟ ವ್ಯಕ್ತಿ.

ಬೆಳಿಗ್ಗೆ ತನ್ನ ಪತ್ನಿಯನ್ನು ಕೂಡಿಗೆಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದು, ಸಂಜೆ ಪತ್ನಿ ಮನೆಗೆ ಹಿಂತಿರುಗಿದ ಸಂದರ್ಭ ಮೃತಪಟ್ಟಿರುವುದು ಗೋಚರಿಸಿದೆ. ಮನೆಯಲ್ಲಿ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತಗೊಂಡಿದೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಮೃತ ದೇಹವನ್ನು ಸಾಗಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಸುರೇಶ್ ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.