ಮಡಿಕೇರಿ, ಮೇ ೨೦ : ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು, ತಾ. ೨೧ ರಿಂದ (ಇಂದಿನಿAದ) ೨೫ರ ತನಕ ಮೋಡಕವಿದ ವಾತಾವರಣದೊಂದಿಗೆ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾ. ೨೧ ರಿಂದ ೨೫ ರೊಳಗೆ ಜಿಲ್ಲೆಯಲ್ಲಿ ಸರಾಸರಿ ೮.೨೦ ಇಂಚು ಮಳೆಯಾಗುವ ಸಾದ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಮಳೆಗಾಲದ ರೀತಿಯ ಸನ್ನಿವೇಶ
ಪ್ರಸ್ತುತ ವಾತಾವರಣದಲ್ಲಿ ಉಂಟಾಗಿರುವ ಅಸಹಜತೆಯಿಂದಾಗಿ ಜಿಲ್ಲೆಯಲ್ಲಿ ಮಳೆಗಾಲದ ರೀತಿಯ ಸನ್ನಿವೇಶ ಎದುರಾಗಿದೆ. ಇದೀಗ ಮೇ ತಿಂಗಳು ಅಂತ್ಯಗೊಳ್ಳುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆಯೂ ಆರಂಭಗೊಳ್ಳಲಿದೆ. ಇದೀಗ ಕೆಲ ದಿನಗಳಿಂದ ವಾತಾವರಣದಲ್ಲಿ ಕಂಡುಬAದಿರುವ ಅಸಹಜತೆಯ ಪರಿಣಾಮದಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ ಪ್ರತಿದಿನ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಸಾಧಾರಣದಿಂದ ಒಂದಷ್ಟು ಹೆಚ್ಚಿನ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ರಭಸದ ಮಳೆ ಸುರಿಯಿತು. ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ಇದೇ ರೀತಿಯ ವಾತಾವರಣವಿತ್ತು. ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಕಂಡುಬರುತ್ತಿವೆ. ಪರಿಸ್ಥಿತಿ ಇದೇ ರೀತಿ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳು ತಿಳಿಸಿವೆ.
ಈ ಬಾರಿ ಜೂನ್ ಆರಂಭದಿAದಲೇ ಮುಂಗಾರು ಮಳೆಯೂ ಜಿಲ್ಲೆಗೆ ಪ್ರವೇಶಿಸಲಿರುವ ಸಂಭವವಿದ್ದು ಜನತೆ ಈಗಿನಿಂದಲೇ
(ಮೊದಲ ಪುಟದಿಂದ) ಮಳೆಗಾಲಕ್ಕೆ ಒಗ್ಗಿಕೊಳ್ಳುವಂತಹ ಸನ್ನಿವೇಶ ಎದುರಾಗಿವೆ. ಮಳೆಗಾಲಕ್ಕೆ ಮುಂಚಿತವಾಗಿ ಜಿಲ್ಲೆಯ ಜನರು ಒಂದಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಜನತೆಗೆ ಒಂದಷ್ಟು ಸಮಸ್ಯೆಯನ್ನು ತಂದೊಡ್ಡಿದAತಾಗಿದೆ.
ಬೆಳೆಗಾರರ ಮೊಗದಲ್ಲಿ ಮಂದಹಾಸ
ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ನಾಲ್ಕೆöÊದು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗಿದೆ. ರೈತರು ಶುಂಠಿ ಬೇಸಾಯದ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ. ಈ ಭಾಗದಲ್ಲಿ ಸೊಮವಾರ ಸಂಜೆ ಹಾಗೂ ಮಂಗಳವಾರ ಬೆಳಿಗ್ಗೆ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದ ಕಾಜೂರು ಹೊಳೆಗೆ ಮತ್ತೆ ಜೀವ ಬಂದಿದೆ. ಹಲವಾರು ದಿನಗಳಿಂದ ಮಳೆಗಾಗಿ ಹಂಬಲಿಸುತ್ತಿದ್ದ ಕಾಫಿ ಬೆಳೆಗಾರರು ಸುರಿದ ಕೃತ್ತಿಕಾ ಮಳೆಯಿಂದ ಸಂತೃಪ್ಪರಾಗಿದ್ದಾರೆ. ತೋಟದಲ್ಲಿ ಕೃಷಿ ಚಟುವಟಿಕೆ ಬಿರುಸಾಗಿ ನಡೆದಿದೆ. ತೋಟದಲ್ಲಿ ಕಾಫಿ ಬೆಳೆ ಹೀಚುಗಟ್ಟಲು ಮಳೆಯ ಅಗತ್ಯವಿತ್ತು. ಕಾಳುಮೆಣಸು, ಶುಂಠಿ ಬೆಳೆಗೆ ಬಹಳ ಒಳ್ಳೆಯದು. ಹೀಗೇ ಇನ್ನೂ ಒಂದು ವಾರ ಮಳೆಯಾದರೇ ತೋಟದಲ್ಲಿ ಗೊಬ್ಬರ ಹಾಕಲು ಸಕಾಲವಾಗಿದೆ ಎಂದು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.