ಕುಶಾಲನಗರ, ಮೇ. ೧೬: ಗುತ್ತಿಗೆದಾರ ಸಂಪತ್ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿವೆ. ತನ್ನ ಕಾರಿನೊಂದಿಗೆ ತೆರಳಿದ ಸ್ನೇಹಿತ ಸಂಪತ್ ಕಾಣೆಯಾಗಿರುವುದಾಗಿ ಕುಶಾಲನಗರ ಸಮೀಪದ ಮಾದಾಪಟ್ಟಣ ರೆಸಾರ್ಟ್ ವ್ಯವಸ್ಥಾಪಕ ಜಾನ್ ಎಂಬವರು ದೂರು ಸಲ್ಲಿಸಿದ್ದರು.

ಇದೀಗ ತನ್ನ ಸಹೋದರನನ್ನು ಕೆಲವರು ಸೇರಿ ಹತ್ಯೆ ಮಾಡಿರುವುದಾಗಿ ಸಂಪತ್ ಸಹೋದರ ವಿನೋದ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸಂಗೀತ, ಆಕೆಯ ಪತಿ ಕಿರಣ್ ಮತ್ತು ಸ್ನೇಹಿತ ಗಣಪತಿ ಹಾಗೂ ಕಾಂಗ್ರೆಸ್ ಮುಖಂಡ ಮಿಥುನ್ ಹಾನಗಲ್ ಅವರ ಮೇಲೆ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಿದ್ದು, ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.