ವೀರಾಜಪೇಟೆ, ಮೇ ೧೬: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಯುವ ತಂಡದ ಮುಂದಾಳತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿರುವ ಕಲ್ಲು ಬಾಯ್ಸ್ ತಂಡದ ವತಿಯಿಂದ ‘ಕಲ್ಲು ಬಾಯ್ಸ್ -ಸೀಸನ್ ತ್ರೀ(೩) ನ್ಯಾಷನಲ್ ಲೆವೆಲ್ ಕಾಲ್ಚೆಂಡು ಪಂದ್ಯಾಟ ನವೆಂಬರ್ ತಿಂಗಳಲ್ಲಿ ವೀರಾಜಪೇಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಹೀಮ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲ್ಚೆಂಡು ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನ ಒಂದುವರೆ ಲಕ್ಷ ರೂಪಯಿ ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ ಒಂದು ಲಕ್ಷ ರೂಪಾಯಿ ನಗದು ಮತ್ತು ಟ್ರೋಫಿ, ಮೂರನೇ ಬಹುಮಾನ ೪೦,೦೦೦ ರೂಪಾಯಿ ನಗದು ಮತ್ತು ಟ್ರೋಫಿ, ನಾಲ್ಕನೇ ಬಹುಮಾನ ೨೦,೦೦೦ ರೂಪಾಯಿ ನಗದು ಮತ್ತು ಟ್ರೋಫಿ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಪಂದ್ಯಾಟದ ಕುರಿತು ಹೆಚ್ಚಿನ ಮಾಹಿತಿಗಾಗಿ ೯೪೮೨೭೩೧೦೯೨ ಈ ಸಂಖ್ಯೆಗೆ ಸಂಪರ್ಕಿಸುವAತೆ ಕೋರಿದ್ದಾರೆ.