ನವದೆಹಲಿ, ಮೇ ೧೫ : ಜಮ್ಮು ಕಾಶ್ಮೀರದಲ್ಲಿನ ನಾದರ್ ಟ್ರಲ್ ಹಾಗೂ ಅವಾಂತಿಪುರದಲ್ಲಿ ಉಗ್ರಗಾಮಿಗಳಿದ್ದ ಖಚಿತ ಮಾಹಿತಿ ಆಧರಿಸಿ ಜಮ್ಮು ಕಾಶ್ಮೀರ ಪೊಲೀಸ್, ಶ್ರೀನಗರ ಸಿ.ಆರ್.ಪಿ.ಎಫ್ ಹಾಗೂ ಭಾರತೀಯ ಭೂ-ಸೇನೆಯು ಜಂಟಿ ಕಾರ್ಯಾಚರಣೆಯನ್ನು ತಾ.೧೫ ರಂದು ನಡೆಸಿತು. ಉಗ್ರಗಾಮಿಗಳನ್ನು ಎಲ್ಲ ಕಡೆಗಳಿಂದ ಆವರಿಸಿದ ಸೇನಾ ಹಾಗೂ ಪೊಲೀಸ್ ತಂಡಗಳು ಗುಂಡಿನ ಚಕಮುಕಿಯಲ್ಲಿ ತೊಡಗಿ ಮೂವರು ಉಗ್ರಗಾಮಿಗಳನ್ನು ಹತ್ಯೆ ಮಾಡುವಲ್ಲಿ ಸಫಲವಾಗಿವೆ ಎಂದು ಭಾರತೀಯ ಸೇನೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಹತರಾದ ಭಯೋತ್ಪಾದಕರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಅವರಿಂದ ಮೂರು ಎಕೆ- ರೈಫಲ್ಗಳು, ಹನ್ನೆರಡು ಮ್ಯಾಗಜೀನ್ಗಳು, ಮೂರು ಗ್ರೆನೇಡ್ಗಳು ಮತ್ತು ಇತರ ಶಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ.