ಮಡಿಕೇರಿ, ಮೇ ೧೫ : ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕೊಯಿಮ್ಸ್) ಸ್ಥಾಪನೆಯಾಗಿ ದಶಕ ಪೂರೈಸಿದ್ದು, ಈ ಸಂಸ್ಥೆಯ ಸ್ಥಾಪನೆಯ ಬಳಿಕ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳನ್ನು ಕಂಡಿದೆ. ಇದರೊಂದಿಗೆ ಮತ್ತಷ್ಟು ಸೇವೆಯೂ ದೊರೆಯಬೇಕು ಎಂಬ ಕೂಗು ಕೂಡ ಇದೆ.
ದೊಡ್ಡ ನಗರಗಳಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜು ಪುಟ್ಟ ಹಾಗೂ ಭೌಗೋಳಿಕವಾಗಿ ವಿಭಿನ್ನವಾಗಿರುವ ಕೊಡಗಿನಲ್ಲಿ ನಿರ್ಮಾಣವಾಗಿದ್ದೆ ಇತಿಹಾಸವಾಗಿದ್ದು, ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ೧೦ ವರ್ಷಗಳಲ್ಲಿ ೬೦೦ ವೈದ್ಯರು ಹೊರಹೊಮ್ಮಿದ್ದಾರೆ. ಇದರೊಂದಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯೂ ಈ ಹಿಂದಿಗಿAತ ವೈದ್ಯಕೀಯ ಸೇವೆ ಸುಧಾರಣೆ ಹೊಂದಿ ಕೊಡಗು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಯವರಿಗೂ ವರದಾನವಾಗಿದೆ.
೧೦ ವರ್ಷಗಳ ಹಿಂದೆ ಮೆಡಿಕಲ್ ಕಾಲೇಜು ಸ್ಥಾಪನೆಗೂ ಮುನ್ನ ಜಿಲ್ಲಾಸ್ಪತ್ರೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ವೈದ್ಯಕೀಯ ಸೇವೆಗಳು ದೊರೆಯುತ್ತಿರಲಿಲ್ಲ. ವೈದ್ಯಕೀಯ ಸವಲತ್ತುಗಳು, ವೈದ್ಯರ ಕೊರತೆ, ತುರ್ತು ಚಿಕಿತ್ಸೆ ಹೀಗೆ ನಾನಾ ಸಮಸ್ಯೆಗಳು ಇದ್ದವು.
ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ವಿಶೇಷ ಆಸಕ್ತಿ ತೋರಿದರು. ಈ ನಿಟ್ಟಿನಲ್ಲಿ ಹಲವು ವರ್ಷಗಳ ಕಾಲ ಸರಕಾರದ ಗಮನವನ್ನು ಸೆಳೆದು ಸೂಕ್ತ ಜಾಗ ಹುಡುಕಾಡಿ ಅವಿರತ ಪ್ರಯತ್ನಗಳ ಬಳಿಕ ಕೊನೆಗೂ ಮಡಿಕೇರಿಗೆ ೨೦೧೩ರಲ್ಲಿ ಮೆಡಿಕಲ್ ಕಾಲೇಜು ಮಂಜೂರುಗೊAಡಿತು. ನಂತರ ನಗರದ ಹೊರವಲಯದ ಅಬ್ಬಿಫಾಲ್ಸ್ ಮಾರ್ಗದ ನಡುವೆ ಸುಮಾರು ೨೪ ಎಕರೆ ವಿಶಾಲ ಜಾಗದಲ್ಲಿ ೨೦೧೬ರಲ್ಲಿ ಕಟ್ಟಡ ನಿರ್ಮಾಣಗೊಂಡು ವೈದ್ಯಕೀಯ ಪರಿಷತ್ ನಿಯಮಾವಳಿಯಡಿ ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಿತು.
೨೦೧೩-೧೪ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಮಂಜೂರಾದ ಆರು ಹೊಸ ವೈದ್ಯಕೀಯ ಮಹಾವಿದ್ಯಾಲಯಗಳ ಪೈಕಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೂ ಒಂದಾಗಿತ್ತು. ರೋಗಿಗಳಿಗೆ ಉನ್ನತ ಸೇವೆಯನ್ನು ಒದಗಿಸುವುದು ವೈದ್ಯಕೀಯ
(ಮೊದಲ ಪುಟದಿಂದ) ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನಾ ಕಾರ್ಯಕ್ರಮಗಳನ್ನು ನಡೆಸುವುದು ವೈದ್ಯಕೀಯ ಸಿಬ್ಬಂದಿಗೆ ತರಬೇತಿಯನ್ನು ನೀಡುವುದು ಮತ್ತು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಸಮ್ಮೇಳನಗಳ ಮೂಲಕ ವೈದ್ಯಕೀಯ ತಂತ್ರಜ್ಞಾನವನ್ನು ಜನತೆಗೆ ಹಂಚುವುದು ಮೊದಲಾದವು ಸಂಸ್ಥೆಯ ಧ್ಯೇಯೋದ್ದೇಶಗಳಾಗಿವೆೆ.
೧೦ ವರ್ಷ - ೬೦೦ ವೈದ್ಯರು
ಮೆಡಿಕಲ್ ಕಾಲೇಜಿನಲ್ಲಿ ಕಳೆದ ೧೦ ವರ್ಷದಲ್ಲಿ ವಿದ್ಯಾಭ್ಯಾಸ ಪಡೆದು ೬೦೦ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿದ್ದಾರೆ.
೫ ವರ್ಷ ಎಂಬಿಬಿಎಸ್ ಶಿಕ್ಷಣದ ಬಳಿಕ ೨ ವರ್ಷದ ಸ್ನಾತಕೋತ್ತರ (ಎಂಡಿ) ಶಿಕ್ಷಣಕ್ಕೂ ಇಲ್ಲಿಯೇ ಅವಕಾಶವಿದ್ದು, ಇದರೊಂದಿಗೆ ಪ್ಯಾರ ಮೆಡಿಕಲ್, ನರ್ಸಿಂಗ್ ಕೋರ್ಸ್, ಅಲೈಡ್ ಸೈನ್ಸ್ ಕೋರ್ಸ್ಗಳು ಕೂಡ ದೊರೆಯುತ್ತವೆ. ಎಂಬಿಬಿಎಸ್ ಶಿಕ್ಷಣಕ್ಕೆ ವಾರ್ಷಿಕ ೧೫೦ ಸೀಟ್‌ಗಳು ಲಭ್ಯವಿವೆ.
ದೇಶದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಮಡಿಕೇರಿಯಲ್ಲಿ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ. ಇದರೊಂದಿಗೆ ಪ್ಯಾರ ಮೆಡಿಕಲ್, ನರ್ಸಿಂಗ್ ಕೋರ್ಸ್, ಅಲೈಡ್ ಸೈನ್ಸ್ ಶಿಕ್ಷಣಕ್ಕೂ ವ್ಯಾಪಕ ಪ್ರತಿಕ್ರಿಯೆ ದೊರೆಯುತ್ತಿದ್ದು, ವಾರ್ಷಿಕ ನೂರಾರು ವಿದ್ಯಾರ್ಥಿಗಳು ಪ್ರವೇಶಾತಿ ಬಯಸುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಅತ್ಯಾಧುನಿಕ ಲ್ಯಾಬ್‌ಗಳು, ತರಗತಿ ಕೊಠಡಿಗಳು, ಕಲಿಕೆ ಪೂರಕ ವಾತಾವರಣವನ್ನು ಕಲ್ಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ‘ಇಂಟರ್ನ್ಶಿಪ್’ಗೂ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾಸ್ಪತ್ರೆಯ ಉನ್ನತೀಕರಣ
ಮೆಡಿಕಲ್ ಕಾಲೇಜು ಸ್ಥಾಪನೆ ಬಳಿಕ ಜಿಲ್ಲಾಸ್ಪತ್ರೆಯೂ ಉನ್ನತೀಕರಣಗೊಂಡಿದ್ದು, ಮೂಲಸೌಲಭ್ಯದೊಂದಿಗೆ ಹೆಚ್ಚಿನ ವಿಭಾಗಗಳು, ಪ್ರಯೋಗಾಲಯ, ಶಸ್ತçಚಿಕಿತ್ಸಾ ಕೊಠಡಿ, ವೈದ್ಯರ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಮೆಡಿಕಲ್ ಕಾಲೇಜಿನೊಂದಿಗೆ ಜಿಲ್ಲಾಸ್ಪತ್ರೆ ವಿಲೀನಗೊಂಡು ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟಿರುವುದರಿಂದ ಸರಕಾರದಿಂದ ಅನುದಾನಗಳು ಹೆಚ್ಚಾಗಿವೆ. ಇತ್ತೀಚೆಗೆ ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ, ತಾಯಿ-೨೦೧೬ರಲ್ಲಿ ವೈದ್ಯಕೀಯ ಶಿಕ್ಷಣ ಆರಂಭವಾಗಿ ಇಂದು ಪ್ರವರ್ಧಮಾನಕ್ಕೆ ಸಂಸ್ಥೆ ಬೆಳೆದು ನಿಂತಿದ್ದು, ಮತ್ತಷ್ಟು ಸೇವೆ, ಸೌಲಭ್ಯ ಒದಗಿಸುವ ಗುರಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ. ಲೋಕೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮೂಲಸೌಕರ್ಯ, ವೈದ್ಯಕೀಯ ಸೇವೆ ಹೆಚ್ಚಾಗುತ್ತಿದೆ. ಎಂಬಿಬಿಎಸ್ ಶಿಕ್ಷಣದೊಂದಿಗೆ ಪ್ಯಾರ ಮೆಡಿಕಲ್, ಅಲೈಡ್ ಸೈನ್ಸ್, ನರ್ಸಿಂಗ್ ಆರಂಭಿಸಲಾಗಿದೆ. ೩ ವರ್ಷಗಳಿಂದ ಸ್ನಾತಕೋತ್ತರ (ಎಂ.ಡಿ.) ಶಿಕ್ಷಣ ಆರಂಭವಾಗಿ ಪ್ರಸ್ತುತ ೬೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಮತ್ತಷ್ಟು ಕೋರ್ಸ್ಗಳು ಸೇರ್ಪಡೆ ಮಾಡುವ ಗುರಿ ಇದೆ ಎಂದು ತಿಳಿಸಿದರು.
ಬೇರೆ ಜಿಲ್ಲೆಗಿಂತ ಉತ್ತಮ ಕೆಲಸ ಕೊಡಗು ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಆಗುತ್ತಿದೆ. ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ತಜ್ಞರಿಂದ ಅಧ್ಯಯನಗಳು ನಡೆಯುತ್ತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಸರಕಾರಿ ಸೌಲಭ್ಯವನ್ನು ಕಾಲಕಾಲಕ್ಕೆ ತಲುಪಿಸುತ್ತಿದ್ದೇವೆ ಎಂದರು.ಮಗು ವಿಭಾಗದ ಆಸ್ಪತ್ರೆಯ ಅಭಿವೃದ್ಧಿ ಯೂ ಕಂಡಿದೆ. ಎಂಬಿಬಿಎಸ್ ಶಿಕ್ಷಣದ ಬಳಿಕ ಪಿಜಿ ಶಿಕ್ಷಣವೂ ಇಲ್ಲಿಯೇ ಇರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯರಾಗಿ ಸೇವೆ ನೀಡುತ್ತಾರೆ. ತಜ್ಞ ವೈದ್ಯರ ಕೊರತೆಯ ನಡುವೆಯೂ ಕೊಡಗಿನ ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಗುಣಮಟ್ಟ ಹೆಚ್ಚಾಗುತ್ತಿದೆ.
ರೇಡಿಯಾಲಾಜಿ ವಿಭಾಗದಲ್ಲಿ ೧.೫ ಟೆಸ್ಲಾ ಎಂ.ಆರ್. ಐ ವೈದ್ಯಕೀಯ ಉಪಕರಣ ಅಳವಡಿಸಲಾಗಿದ್ದು ಜಿಲ್ಲೆಯ ರೋಗಿಗಳು ಇಲ್ಲಿಯೇ ಎಂ. ಆರ್.ಐ ಸ್ಕಾö್ಯನಿಂಗ್ ಸೇವೆಯನ್ನು ನೀಡಲಾಗುತ್ತಿದೆ. ಶಾಸಕ ಡಾ|| ಮಂತರ್‌ಗೌಡ ಅವರ ಪ್ರಯತ್ನದಿಂದ ಈ ಸೌಲಭ್ಯ ಕಲ್ಪಿಸಲ್ಪಟ್ಟಿದೆ.
ಅತ್ಯಾಧುನಿಕ ಸಿಟಿ ಸ್ಕಾö್ಯನ್, ೮೦೦ ಎಂ.ಎ ಪ್ಲೋರೋಸ್ಕೋಪಿ ಎಕ್ಸ್ರೆ ಉಪಕರಣ, ಆಸ್ಪತ್ರೆಯ ಪ್ರತಿ ವಾರ್ಡ್ನಲ್ಲಿ ಪೋರ್ಟೇಬಲ್ ಎಕ್ಸ್ರೆ, ೨ ಅಲ್ಟಾç ಸೌಂಡ್ ಉಪಕರಣದ ಮೂಲಕ ಸ್ಕಾö್ಯನಿಂಗ್ ನಡೆಸಲಾಗುತ್ತಿದೆ.
ಎಂ.ಆರ್. ಐ ಮತ್ತು ಸಿಟಿ ಸ್ಕಾö್ಯನ್ ವರದಿಯನ್ನು ಟೆಲಿ ರೇಡಿ ಯಾಲಜಿ ವ್ಯವಸ್ಥೆ ಮೂಲಕ ೩ ರಿಂದ ೪ ಗಂಟೆಯ ಅವಧಿ ಯೊಳಗೆ ರೋಗಿ ಗಳಿಗೆ ನೀಡ ಲಾಗುತ್ತಿದೆ.
g ಹೆಚ್.ಜೆ. ರಾಕೇಶ್