ವೀರಾಜಪೇಟೆ, ಮೇ ೧೩ : ಎವೇಂರ‍್ಸ್ ಬಾಸ್ಕೇಟ್ ಬಾಲ್ ಕ್ಲಬ್ ವೀರಾಜಪೇಟೆ ಇವರ ಆಶ್ರಯದಲ್ಲಿ ಕೊಡಗು ಬಾಸ್ಕೆಟ್‌ಬಾಲ್ ಲೀಗ್ ೨ನೇ ಆವೃತ್ತಿಯ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮ ಪೆರುಂಬಾಡಿ ಪೆಪ್ಪರ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉದ್ಯಮಿ ಡಿ.ಕೋಚ್‌ನ ನಿತೀನ್ ಅವರು ಜಿಲ್ಲೆಯಲ್ಲಿ ಹಾಕಿ, ಪುಟ್ಬಾಲ್, ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹ ಲಭಿಸುತ್ತಿದೆ. ಹೆಚ್ಚು ಹೆಚ್ಚು ಪ್ರಖ್ಯಾತವಾಗುತ್ತಿವೆ. ಅದರಂತೆ ಬಾಸ್ಕೆಟ್‌ಬಾಲ್ ಕ್ರೀಡೆಗೂ ಪ್ರೋತ್ಸಾಹ ಲಭಿಸುವಂತಾಗಬೇಕು. ಸ್ಥಳೀಯ ಆಟಗಾರರು ದೇಶಿಯ ಮಟ್ಟ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಲು ಸಾಧ್ಯವಾಗದಿರಬಹುದು. ಆದರೇ ಬಾಸ್ಕಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ತೋರುವಂತೆ ಉತ್ತೇಜಿಸಬಹುದು ಎಂದರು.

ಹಿರಿಯ ಬಾಸ್ಕೆಟ್‌ಬಾಲ್ ಪಟು ಚೊಟ್ಟಂಗಡ ಸೋಮಯ್ಯ ಅವರು ಮಾತನಾಡಿ, ಬಾಸ್ಕೆಟ್‌ಬಾಲ್ ಕ್ರೀಡೆಯು ಕಲಾತ್ಮಕ ಶೈಲಿಯ ಕ್ರೀಡೆಯಾಗಿದೆ. ಈ ಮೊದಲು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಾಸ್ಕೆಟ್‌ಬಾಲ್ ಕ್ರೀಡೆಯು ಕ್ಷೀಣಿಸುತ್ತಿದೆ. ಜಿಲ್ಲೆಯ ಕ್ರೀಡಾಪಟುಗಳಿಗೆ ಮನ್ನಣೆ ದೊರಕದೇ ಹೊರ ಜಿಲ್ಲೆ ಮತ್ತು ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡಲು ವಲಸೆ ಹೋಗುತಿದ್ದಾರೆ ಎಂದರು.

ಎವೇAರ‍್ರ್ಸ ಬಾಸ್ಕೆಟ್‌ಬಾಲ್ ಕ್ಲಬ್ ವೀರಾಜಪೇಟೆ ಸಂಚಾಲಕÀ ಇರ್ಷಾದ್ (ಇಚ್ಚು) ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು ತನ್ನ ಎರಡನೇ ಆವೃತ್ತಿಯಾದ ಕೊಡಗು ಬಾಸ್ಕೆಟ್‌ಬಾಲ್ ಲೀಗ್ ಪಂದ್ಯಾಟವನ್ನು ತಾ. ೧೮ರಂದು ವೀರಾಜಪೇಟೆ ನಗರದ ಪ್ರಗತಿ ಆಂಗ್ಲ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಪಂದ್ಯಾಟಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಜಿಲ್ಲೆಯ ಮಾರ್ಷಲ್ಸ್ ಮಡಿಕೇರಿ, ಟೀಗಲ್ಸ್ ಹೂಪ್ ಸ್ಟಾರ್ ಪೊನ್ನಂಪೇಟೆ, ಕೂರ್ಗ್ ಯುನೈಟೆಡ್ ಪೊನ್ನಂಪೇಟೆ, ಬ್ಲಾಕ್ ಕೋಬ್ರಾಸ್ ವೀರಾಜಪೇಟೆ, ಎಶೀಯನ್ ಹಾರ್ಡ್ವೇರ್ ವೀರಾಜಪೇಟೆ, ಡಿ.ಕೋಚ್ ಗೋಣಿಕೊಪ್ಪ ಒಟ್ಟು ೬ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿವೆ. ೬ ತಂಡಗಳಿAದ ಒಟ್ಟು ಕೊಡಗು ಜಿಲ್ಲೆ ಮೂಲದ ೬೦ ಮಂದಿ ಆಟಗಾರರು ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡರಾದ ಎಜಾಜ್ ಅಹಮ್ಮದ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಆಖೀಲ್, ಸಮಾಜ ಸೇವಕರಾದ ರವೂಫ್ ಅವರುಗಳು ಉಪಸ್ಥಿತರಿದ್ದರು. ಎವೇಂರ‍್ರ್ಸ ಬಾಸ್ಕೆಟ್‌ಬಾಲ್ ಕ್ಲಬ್ ವೀರಾಜಪೇಟೆ ಸಂಸ್ಥೆಯ ಮಾದಂಡ ತಿಮ್ಮಯ್ಯ, ನೌಷೀಬ್ ಮತ್ತು ವಿವಿಧ ತಂಡಗಳ ಮಾಲೀಕರು ಹಾಗೂ ಆಟಗಾರರು ಹಾಜರಿದ್ದರು.