ಗೋಣಿಕೊಪ್ಪಲು, ಮೇ ೧೩: ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯು ಮೈದಾನ ೨ ರಲ್ಲಿ ನಡೆಯಿತು. ೩ ಮಹಿಳಾ ತಂಡಗಳು ಮುನ್ನಡೆ ಸಾಧಿಸಿದವು.
ಮೊದಲ ಪಂದ್ಯವು ಮುಕ್ಕಾಟಿರ (ಹರಿಹರ) ತಂಡ ಹಾಗೂ ಕಾಣತಂಡ ತಂಡಗಳ ನಡುವೆ ನಡೆಯಿತು . ಮೊದಲು ಬ್ಯಾಟಿಂಗ್ ಆರಂಭಿಸಿದ ಮುಕ್ಕಾಟಿರ ತಂಡವು ೧ ವಿಕೆಟ್ ಕಳೆದುಕೊಂಡು ೯೧ ರನ್ ಬಾರಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಕಾಣತಂಡ ತಂಡವು ೪ ವಿಕೆಟ್ ಕಳೆದುಕೊಂಡು ೨೪ ರನ್ ಸಂಪಾದಿಸುವ ಮೂಲಕ ಸೋಲನ್ನು ಅನುಭವಿಸಿತು.
ಎರಡನೇ ಪಂದ್ಯವು ಅಜ್ಜಿಕುಟ್ಟಿರ ಹಾಗೂ ಓಡಿಯಂಡ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಬಿಸಿದ ಅಜ್ಜಿಕುಟ್ಟಿರ ತಂಡವು ೨ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ಬ್ಯಾಟಿಂಗ್ ಆರಂಭಿಸಿದ ಓಡಿಯಂಡ ಮಹಿಳಾ ತಂಡವು ೧.೩ ಓವರ್ ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೯ ರನ್ ಕಲೆ ಹಾಕುವ ಮೂಲಕ ಗೆಲುವಿನ ನಗೆ ಬೀರಿತು.
ಮೂರನೇ ಪಂದ್ಯವು ಚೊಟ್ಟೆಯಂಡಮಾಡ ಹಾಗೂ ಮಣವಟ್ಟಿರ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಮಣವಟ್ಟಿರ ಮಹಿಳಾ ತಂಡ ೧ ವಿಕೆಟ್ ಕಳೆದುಕೊಂಡು ೫೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಚೊಟ್ಟೆಯಂಡಮಾಡ ತಂಡವು ಬ್ಯಾಟಿಂಗ್ ಆರಂಭಿಸಿ ನಿಗದಿತ ಓವರ್ ನಲ್ಲಿ ೫ ವಿಕೆಟ್ ಕಳೆದುಕೊಂಡು ೩೦ ರನ್ ಗಳಿಸಿ ಸೋಲನ್ನು ಅನುಭವಿಸಿತು.