೧೯೭೧ ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಭಾರತ ಅಮೋಘ ಜಯ ಸಾಧಿಸಿತ್ತು. ಅಲ್ಲದೆ, ಅದೇ ಸಂದರ್ಭ ಪಾಕಿಸ್ತಾನ ಇಬ್ಭಾಗಗೊಂಡು ನೂತನವಾಗಿ ಬಾಂಗ್ಲಾ ದೇಶ ಉದಯಗೊಂಡಿತು. ಇಂದಿರಾ ಗಾಂಧಿ ಅವರು ಆಗ ಭಾರತದ ಪ್ರಧಾನಿಯಾಗಿದ್ದರು. ಆ ಬಳಿಕ ೧೯೯೯ ರಲ್ಲಿ ಎರಡು ದೇಶಗಳ ನಡುವೆ ಕಾರ್ಗಿಲ್ ಕದನ ನಡೆದು ಪಾಕಿಸ್ತಾನ ಪರಾಭವಗೊಂಡಿತ್ತು. ಭಾರತ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಂಡು ಜಯ ಸಾಧಿಸಿತ್ತು. ಆಗ ವಾಜಪೇಯಿ ಅವರು ಪ್ರಧಾನಿಯಾಗಿದ್ದರು. ಇದೀಗ ೨೦೨೫ ರಲ್ಲಿ ನೇರವಾಗಿ ಭಾರತ- ಪಾಕ್ ಸಮರ ಘೋಷಿಸಿಲ್ಲವಾಗಿದ್ದರೂ ಪಾಕಿಸ್ತಾನದ ಉಗ್ರಗಾಮಿಗಳ ಅಟ್ಟಹಾಸ ಮೆಟ್ಟಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದ ಸಮರೋಪಾದಿಯ ಕಾರ್ಯಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅದ್ಭುತ ಜಯ ಸಾಧಿಸಿದೆ.
ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ದಿಟ್ಟ ನಿರ್ಧಾರ ಪ್ರಮುಖ ಪಾತ್ರ ವಹಿಸಿತು, ಭಾರತದ ಮೂರು ವಜ್ರಗಳಾದ ಭೂಸೇನೆ, ವಾಯು ಸೇನೆ ಹಾಗೂ ನೌಕಾ ಪಡೆಯ ಸೇನಾಧಿಕಾರಿಗಳಿಗೆ ಶತ್ರುಗಳನ್ನು, ಭಯೋತ್ಪಾದಕರನ್ನು ಸದೆ ಬಡಿಯಲು ದೇಶದ ರಕ್ಷಣೆಗೆ ಅಗತ್ಯವಾದ ಬಲಪ್ರಯೋಗ ಮಾಡಲು ಪೂರ್ಣಾಧಿಕಾರ ನೀಡಿದುದು ನಿಜಕ್ಕೂ ಅತ್ಯುತ್ತಮ ಹೆಜ್ಜೆಯಾಗಿದೆ. ಈ ಸಂದರ್ಭ ದೇಶದ ಎಲ್ಲಾ ವಿರೋಧ ಪಕ್ಷಗಳ ನಾಯಕರು ಏಕಮನಸ್ಸಿನಿಂದ ಬೆಂಬಲ ಸೂಚಿಸಿದ್ದುದು ಹೆಮ್ಮೆಯ ವಿಷಯ. ಜೊತೆಗೆ, ಧರ್ಮಾತೀತವಾಗಿ, ಜಾತ್ಯತೀತವಾಗಿ, ಮತೀಯಾತೀತವಾಗಿ ಸರ್ವಜನಾಂಗದ, ಸರ್ವಮತಗಳ ಬಂಧುಗಳು ಒಮ್ಮನಸ್ಸಿನಿಂದ ಭಾರತದ ಜಯಕ್ಕಾಗಿ ಪ್ರಾರ್ಥಿಸಿ ನೈತಿಕ ಸ್ಥೆöÊರ್ಯ ತುಂಬಿದುದು ಈ ಮಹಾನ್ ದೇಶದ ಸೌಭಾಗ್ಯವೇ ಸರಿ. ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತÀವು ವಿವಿಧ ಜನಾಂಗಗಳ, ವಿವಿಧ ಮತಗಳ ನೆಲೆಯ ಪುಣ್ಯಭೂಮಿ ಎನಿಸಿದ್ದು, ಬೇರೆ ಸಂದರ್ಭಗಳಲ್ಲಿ ಯಾವದೇ ಭಿನ್ನಮತಗಳು ಸಹಜವೆನಿಸಿದ್ದರೂ ದೇಶದ ಪ್ರಶ್ನೆ ಬಂದಾಗ ಭಾರತದ ರಕ್ಷಣೆಗೆ “ ನಾವೆಲ್ಲ ಒಂದೇ,” ಎಂಬ ಉದ್ಘೋಷಣೆಯೊಂದಿಗೆ ನಮ್ಮ ಸೇನಾ ಪಡೆಗಳಿಗೆ
“ಯುದ್ಧ ಮಾಡಿ ಸದೆ ಬಡಿಯಿರಿ, ನಾವೆಲ್ಲ ನಿಮ್ಮ ಬೆನ್ನಹಿಂದೆ ಇದ್ದೇವೆ” ಎಂಬ ಧೈರ್ಯ, ಸ್ಥೆöÊರ್ಯ ತುಂಬಿದುದು, ಈ ಮಹಾನ್ ದೇಶದ ಸಾಗರೋಪಮ ಅದ್ಭುತ ಶಕ್ತಿಯಾಗಿದೆ. ಇದರ ಅರಿವಾದೊಡನೇ ಶತ್ರುಗಳ ಜಂಘಾಬಲವೇ ಉದುಗಿ ಹೋಗುತ್ತದೆ. ದೇಶದ ಸಾಮಾನ್ಯ ಜನ, ಸರಕಾರ, ಆಡಳಿತಕಾರರು ಏನೇ ಬೆಂಬಲ ನೀಡಿದರೂ ಯುದ್ಧ ಕಣದಲ್ಲಿ ಶಸ್ತಾçಸ್ತ ಹಿಡಿದು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಯೋಧರ, ಸೇನಾ ಪ್ರಮುಖರ ಸೇವೆಗೆ ಖಂಡಿತ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೋಟ್ಯಂತರ ಜನರ ನೆಮ್ಮದಿಗಾಗಿ, ಅವರ ಪ್ರಾಣ ರಕ್ಷಣೆಗಾಗಿ, ದೇಶದ ಸರ್ವ ಸ್ವತ್ತುಗಳ, ನೆಲ-ಜಲದ ರಕ್ಷಣೆಗಾಗಿ ಶತ್ರುಗಳನ್ನು ಸದೆಬಡಿದು ವೀರತನದಿಂದ ಮುಂದೆ ಹೆಜ್ಜೆಯಿರಿಸಿ ಸಾಗುವ ನಮ್ಮ ಮಹಾನ್ ಯೋಧರು ಈ ದಿಸೆಯಲ್ಲಿ ಅಭಿವಂದನಾರ್ಹರು, ಅಭಿನಂದನಾರ್ಹರು.
ಈಗ ನಾವು ಮಾಡಬೇಕಾದುದು ಇಷ್ಟೆ. ಸದ್ಯಕ್ಕೆ ದೇಶದಲ್ಲಿ ಶಾಂತಿ ನೆಲೆಸಿದೆ, ಶತ್ರುಗಳು ಪರಾನ್ಮುಖರಾಗಿದ್ದಾರೆ. ಆದರೆÀ, ಮತ್ತೆ ಇಂತಹ ಸನ್ನಿವೇಶಗಳು ಬರುವುದಿಲ್ಲ ಎನ್ನುವಂತಿಲ್ಲ. ಏಕೆಂದರೆ, ಅಸುರರು ಮತ್ತು ದೇವತೆಗಳು ಆಗಿಂದಾಗ ಸಮರ ರಂಗದಲ್ಲಿ ಸೆಣೆಸಾಡುವ ಪ್ರಕರಣಗಳನ್ನು ನಾವು ನಮ್ಮ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದನ್ನು ಗಮನಿಸಿದ್ದೇವೆ, ಮಹಾಭಾರತ-ರಾಮಾಯಣ ಕತೆಗಳನ್ನು ಕೇಳಿದ್ದೇವೆ. ಈ ಎಲ್ಲದರಲ್ಲಿ ಮುಖ್ಯವಾಗಿ ಅಧರ್ಮದ ವಿರುದ್ಧ ಧರ್ಮದ ಜಯದ ಫಲಿತಾಂಶÀವಿದೆ. ಅಸುರರ ವಿರುದ್ಧ ಸುರರು ಕೊನೆಗೂ ಜಯಗಳಿಸಿ ವಿಶ್ವಶಾಂತಿಗೆ ಕಾರಣವಾಗುವ ನೈತಿಕತೆಯ ಅಂಶಗಳನ್ನು ಕಂಡುಕೊAಡಿದ್ದೇವೆ. ಅದೇ ರೀತಿ ಜಗತ್ತಿನಲ್ಲಿ ಸುಸಂಸ್ಕೃತ ದೇಶವಾದ ಭಾರತ ಸದಾ ಶಾಂತಿ ಬಯಸಿದರೂ ಅನವಶ್ಯಕವಾಗಿ ಕೆಣಕುತ್ತಾ ನಮ್ಮನ್ನು ನಾಶಗೊಳಿಸಲು ಬರುವ ದುಷ್ಟ ಪಾಕ್ ಭಯೋತ್ಪಾದಕರು ಹಾಗೂ ಇದಕ್ಕೆ ಬೆಂಬಲ ನೀಡುವ ಸದಾ ನಮ್ಮ ಅಹಿತ ಬಯಸುವ ಕೆಲವು ನೆರೆ ರಾಷ್ಟçಗಳ ದುರ್ನೀತಿಯಿಂದಾಗಿ ಆಗಿಂದಾಗ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎನ್ನುವಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತೀಯನು ಕೂಡ ತಾನು ನೆಲೆಸಿರುವ ಈ ಭಾರತದ ಮಣ್ಣಿನಲ್ಲಿ ನಮಗಾಗಿ ಗಡಿ ಪ್ರದೇಶಗಳಲ್ಲಿ ಸದಾ ಆತಂಕದಿAದ ಹದ್ದುಗಣ್ಣಿಟ್ಟು ಹೋರಾಡುತ್ತಿರುವ ನಮ್ಮ ಸೈನಿಕರ ರಕ್ಷಣೆಗಾಗಿ, ಜಯಸಾಧನೆಗಾಗಿ ಒಳಿತಿಗಾಗಿ ಪ್ರಾರ್ಥಿಸೋಣ. ನಮ್ಮೆಲ್ಲರಿಗೆ ಆಶ್ರಯ ನೀಡಿರುವ ಭಾರತಾಂಬೆಗೆ ನಮನ ಸಲ್ಲಿಸೋಣ, ದೇಶದ ರಕ್ಷಣೆಯ ಪ್ರಶ್ನೆ ಬಂದಾಗ ಜಾತಿ, ಮತ, ರಾಜಕೀಯ ಮರೆತು ಈ ಬಾರಿ ತೋರಿದ ಒಗ್ಗಟ್ಟನ್ನೇ ಮುಂದುವರಿಸುತ್ತಾ ಒಂದಾಗೋಣ, ಸಾಗೋಣ.
-ಜಿ. ರಾಜೇಂದ್ರ , ಪ್ರಧಾನ ಸಂಪಾದಕ