ನವದೆಹಲಿ ಮೇ ೧೩: ಜಮ್ಮು ಕಾಶ್ಮೀರದ ಶೋಪಿಯನ್ ಜಿಲ್ಲೆಯ ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರಿದ್ದ ಬಗ್ಗೆ ರಾಷ್ಟಿçÃಯ ರೈಫಲ್ಸ್ ಘಟಕದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆಯು ಈ ಭಯೋತ್ಪಾದಕರ ಶೋಧ ಕಾರ್ಯಾಚರಣೆಯನ್ನು ತಾ. ೧೩ ರಂದು ನಡೆಸಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಸಫಲವಾಗಿದೆ. ಕಾರ್ಯಾಚರಣೆಯ ವೇಳೆ, ಭಯೋತ್ಪಾದಕರು ಹಾಗೂ ಯೋಧರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ಮೂವರು ಭಯೋತ್ಪಾದಕರು ಹತ್ಯೆಗೊಂಡಿದ್ದಾರೆ ಎಂಬುದಾಗಿ ಭಾರತೀಯ ಭೂ-ಸೇನೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ಶೋಕಲ್ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದ್ದರಿಂದ ಆಪರೇಷನ್ ಕೆಲ್ಲರ್ ಎಂದು ಈ ಕಾರ್ಯಾ ಚರಣೆಗೆ ಹೆಸರಿಡಲಾಗಿದೆ. ಉಗ್ರರು ಬಳಸಿದ್ದ ಶಸ್ತಾçಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹತರಾದ ಇಬ್ಬರು ಉಗ್ರರನ್ನು ಪಾಕಿಸ್ತಾನಿ ಉಗ್ರಗಾಮಿ ಸಂಘಟನೆಯ ಲಕ್ಷರ್ ಇ ತೊಯ್ಬದ ‘ದಿ ರೆಸಿಸ್ಟೆಂಟ್ ಫ್ರಂಟ್'ನ ಶಾಹಿದ್ ಅಹ್ಮದ್ ಕುಟ್ಟೆ ಹಾಗೂ ಅದ್ನನ್ ಶಾಫಿ ಎಂದು ಗುರುತಿಸಲಾಗಿದ್ದು ಮತ್ತೋರ್ವನನ್ನು ಗುರುತಿಸುವ ಕಾರ್ಯ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ಶಾಹಿದ್ ಕುಟ್ಟೆ, ೨೦೨೪ರ ಏಪ್ರಿಲ್‌ನಲ್ಲಿ ಡ್ಯಾನಿಷ್ ರೆಸಾರ್ಟ್ನಲ್ಲಿ ಇಬ್ಬರು ಜರ್ಮನಿ ಪ್ರವಾಸಿಗರನ್ನು ಹತ್ಯೆಗೈದಿದ್ದ. ೨೦೨೪ರ ಮೇನಲ್ಲಿ ಶೋಪಿಯನ್ ಜಿಲ್ಲೆಯಲ್ಲಿ ಬಿ.ಜೆ.ಪಿ ಮುಖ್ಯಸ್ಥ ಹೀರ್ಪೋರ ಅವರನ್ನೂ ಈ ಭಯೋ ತ್ಪಾದಕ ಹತ್ಯೆಗೈದಿದ್ದ. ಅದ್ನನ್ ಶಾಫಿ, ೨೦೨೪ರ ಅಕ್ಟೋಬರ್‌ನಲ್ಲಿ ಶೋಪಿಯನ್‌ನ ಕಾರ್ಮಿಕರೊಬ್ಬರನ್ನು ಹತ್ಯೆಗೈದಿದ್ದ.