ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆಸಿದ ಭಯೋತ್ಪಾದನೆ ದಾಳಿಗೆ ಪ್ರತೀಕಾರ ಮಾತ್ರವಲ್ಲ. ವಿಶ್ವದ ಶಾಂತಿ ಸುವ್ಯವಸ್ಥೆಗೆ ಸವಾಲಾಗಿರುವ ಭಯೋತ್ಪಾದನೆ ಚಟುವಟಿಕೆಯ ವಿರುದ್ಧದ ಕಠಿಣವಾದ ಪ್ರತ್ಯುತ್ತರ ಕೂಡ ಆಗಿದೆ ‘ಆಪರೇಷನ್ ಸಿಂಧೂರ್’ ಪಾಕಿಸ್ತಾನದಲ್ಲಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಒಂಭತ್ತು ಭಯೋತ್ಪಾದಕ ಕೇಂದ್ರಗಳ ವಿರುದ್ಧ ಭಾರತ ಸೇನೆ ನಡೆಸಿದ ಮಿಂಚಿನ ಆಕ್ರಮಣ ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನಕ್ಕಿರುವ ತಿರುಗೇಟಾಗಿ ಕಾಣಬಹುದು.
ದೇಶದ ಆತ್ಮವಾಗಿರುವ ಪೆಹಲ್ಗಾಮಿನಲ್ಲಿ ಆಕ್ರಮಿಸಲ್ಪಟ್ಟಿದ್ದು, ಅಮಾಯಕರಾದ ೨೬ ಭಾರತೀಯರನ್ನು ಕೊಲೆಗೈದ ಭಯೋತ್ಪಾದಕರನ್ನು ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಪತ್ತೆ ಹಚ್ಚಿ ಅವರು ಊಹಿಸಲಾಗದ ರೀತಿಯ ಶಿಕ್ಷೆ ನೀಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ಏಪ್ರಿಲ್ ೨೨ರ ಭಯೋತ್ಪಾದಕ ದಾಳಿಯ ತಿರುಗೇಟು ಭಾರತ ಈಗಾಗಲೇ ಉಗ್ರ ಸ್ವರೂಪದಲ್ಲಿ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹೊರಗೆ, ಪಾಕ್ ಮಣ್ಣಿನಲ್ಲಿ ಹಾಗೂ ಪಂಜಾಬ್ ಪಾಕ್ ಪ್ರಾಂತ್ಯದಲ್ಲಿ ಭಾರತ ಸೈನಿಕ ಚಟುವಟಿಕೆ ನಡೆಸುತ್ತಿರುವುದು ೧೯೭೧ರ ನಂತರ ಇದೇ ಮೊದಲ ಬಾರಿಗೆ ಎಂಬ ವಿಶೇಷತೆ ಕೂಡ ಇದೆ.
ಯಾವುದೇ ನ್ಯೂನತೆಗಳಿಲ್ಲದ ನಿಖರವಾದ ಸೂತ್ರಗಾರಿಕೆ ಹಾಗೂ ನಮ್ಮ ಸೇನೆಯ ಹೊಂದಾಣಿಕೆಯ ಹೆಜ್ಜೆ ಈ ಪ್ರತ್ಯಾಕ್ರಮಣದಲ್ಲಿ ಸ್ಪಷ್ಟವಾಗುತ್ತಿದೆ. ಶತ್ರು ನಿರೀಕ್ಷಿಸದ ಸಮಯದಲ್ಲಿ, ನಿರೀಕ್ಷಿಸದ ಸ್ಥಳದಲ್ಲಿ ಪ್ರಹಾರ ಆಗಬೇಕು ಎಂಬ ನಿಟ್ಟಿನಲ್ಲಿ ಅದನ್ನು ಸ್ಪಷ್ಟವಾಗಿ ಪತ್ತೆ ಹಚ್ಚಿ ಆಕ್ರಮಣ ನಡೆಸಿರುವುದರಲ್ಲಿ ಆರಂಭವಾಗಿದೆ ಭಾರತೀಯ ಸೇನೆಯ ಸೂಕ್ಷö್ಮತೆ.
ಸಿಂಧೂ ನದಿ ಜಲಒಪ್ಪಂದ ಹಿಂಪಡೆದು ಪಾಕಿಸ್ತಾನದಿಂದ ಬರುತ್ತಿದ್ದ ಎಲ್ಲಾ ಆಮದುಗಳನ್ನು ರದ್ದು ಮಾಡಿ ಪಾಕಿಸ್ತಾನ ಪೌರರ ಎಲ್ಲಾ ರೀತಿಯ ವೀಸಾವನ್ನು ಸ್ಥಗಿತಗೊಳಿಸಿರುವುದು ಸೇರಿ ಪೆಹಲ್ಗಾಮಿನ ನಂತರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡರು ಕೂಡಾ ಆ ದೇಶವನ್ನು ನಡುಗಿಸಲು ಕಾರಣವಾಗಿದ್ದು ‘ಆಪರೇಷನ್ ಸಿಂಧೂರ್’ ಮೂಲಕವಾಗಿದೆ. ಅನೇಕ ವರ್ಷಗಳಿಂದ ಪಾಕ್ ಪರಿಪೋಶಿಸಿ ಬೆಳೆಸಿದ ಭಯೋತ್ಪಾದಕ ಕೇಂದ್ರಗಳನ್ನು ನಮ್ಮ ಸೈನ್ಯ ನುಚ್ಚುನೂರು ಮಾಡಿರುವುದು ಅತ್ಯದ್ಭುತ! ಪ್ರತೀಕಾರ ತೀರಿಸುವ ಅವಕಾಶವನ್ನು ಭಾರತೀಯ ಸೇನೆ ಸಮರ್ಥವಾಗಿ ಉಪಯೋಗಿಸಿಕೊಂಡಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸ್ಪಷ್ಟಪಡಿಸಿದರು. ಪಾಕಿಸ್ತಾನ ಎಷ್ಟೇ ಸಂಬAಧ ಇಲ್ಲ ಅಂದರೂ ಕೂಡ ಭಾರತ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾದ ಬಹುತೇಕ ಭಯೋತ್ಪಾದಕ ಸಂಘಟನೆಗಳು ಪಾಕ್ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವುದು, ಪಾಕ್ ಸಂಬAಧ ಹೊಂದಿರುವುದಾಗಿ ಸ್ಪಷ್ಟವಾಗುತ್ತದೆ. ಈ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಬೇಕಾದ ಎಲ್ಲಾ ಸಹಕಾರಗಳನ್ನು ನೀಡುತ್ತಿದೆ. ಭಾರತದಲ್ಲಿ ನಡೆದ ಎಲ್ಲಾ ಭಯೋತ್ಪಾದಕ ಕೃತ್ಯಗಳ ಕೇಂದ್ರಬಿAದು ಪಾಕಿಸ್ತಾನವೇ ಆಗಿದೆ ಎಂಬುದಕ್ಕೆ ಬೇರೆ ಸಾಕ್ಷ್ಯಗಳ ಅಗತ್ಯ ಇಲ್ಲ. ಪಾರ್ಲಿಮೆಂಟ್, ಮುಂಬೈ, ಪುಲ್ವಾಮ, ಪೆಹಲ್ಗಾಮ್ ದಾಳಿಗಳು ಉದಾಹರಣೆ ಮಾತ್ರ.
ಹಿಂದಿನಿAದಲೂ ಭಾರತ ವಿರೋಧಿ ನಿಲುವನ್ನೇ ಸ್ವೀಕರಿಸಿ ಬರುತ್ತಿರುವ ಪಾಕ್ ಸೇನೆ ಹಾಗೂ ಅವರ ನಿಯಂತ್ರಣದಲ್ಲಿರುವ ಸರ್ಕಾರಗಳ ತಪ್ಪುಗಳಿಗೆ ಅಲ್ಲಿನ ಅಮಾಯಕರನ್ನು ಶಿಕ್ಷಿಸಲು ಭಾರತ ಯಾವುದೇ ಕಾಲದಲ್ಲೂ ಮುಂದಾಗಲಿಲ್ಲ. ಭಾರತ ಆಕ್ರಮಣ ನಡೆಸಿರುವುದು ಪಾಕ್ ಸೈನಿಕ ಕೇಂದ್ರಗಳನ್ನಲ್ಲ, ಅಲ್ಲಿನ ಭಯೋತ್ಪಾದಕ ಶಿಬಿರಗಳಿಗೆ ಆದರೂ ಕೂಡ ಅದು ಯುದ್ಧ ಸಮಾನ ಎಂದು ಪಾಕ್ ಪ್ರಧಾನಮಂತ್ರಿ ಶಹಬಾಸ್ ಶರೀಫ್ ಹೇಳಿಕೆ ನೀಡಿ ಭಾರತಕ್ಕೆ ಪ್ರತ್ಯುತ್ತರ ಸೇನೆ ನೀಡುವುದಾಗಿ ಹೇಳಿರುವುದರಲ್ಲಿ ಕುಹಕ ಎಚ್ಚರಿಕೆಯ ಧ್ವನಿ ಅಡಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಆ ದೇಶದ ವಿರುದ್ಧದ ಹೋರಾಟ ಎಂದು ಬಿಂಬಿಸಿರುವುದರಲ್ಲೇ ಅವರ ನಿಗೂಢ ಗುರಿ ಗೋಚರಿಸುತ್ತಿದೆ.
ಸಂಬAಧಗಳು ಹದಗೆಟ್ಟಾಗ, ವಾತಾವರಣ ಮಲಿನವಾಗುವಾಗ ಅಣು ಅಸ್ತçಗಳು ಕೈಯಲ್ಲಿರುವ ಉಭಯ ರಾಷ್ಟ್ರಗಳ ಜನಸಾಮಾನ್ಯರು ಆತಂಕಕ್ಕೆ ಒಳಗಾಗುವುದು ಸಹಜ. ಆಧುನಿಕ ಲೋಕದಲ್ಲಿ ಯಾವುದೇ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಯುದ್ಧ ನೀಡಿರುವುದು ಬರೀ ನಷ್ಟಗಳನ್ನು ಮಾತ್ರವಾಗಿದೆ. ರಕ್ತದಿಂದ ಅಲ್ಲ ಸಹಬಾಳ್ವೆಯಿಂದಾಗಿರಬೇಕು. ಹೊಸಲೋಕದ ನಿರ್ಮಾಣ ಎಂದಿರುವಾಗ ಭಾರತ ಗುರಿಯಿಟ್ಟಿದ್ದು ಪಾಕ್ ಮಣ್ಣಿನ ಭಯೋತ್ಪಾದಕರನ್ನು ಮಾತ್ರವಾಗಿತ್ತು. ಆದರೆ ಇದು ನಮ್ಮ ದೇಶದ ವಿರುದ್ಧದ ಯುದ್ಧ ಎಂಬ ಅರ್ಥ ನೀಡಿ ಪಾಕ್ ಸೇನೆ ಭಾರತದ ಮೇಲೆ ದಾಳಿ ನಡೆಸಲು ಮುಂದಾಯಿತು. ಈಗಾಗಲೇ ಪಾಕಿಸ್ತಾನ ಉಡಾಯಿಸಿದ ಎಲ್ಲಾ ಕ್ಷಿಪಣಿ ದ್ರೋಣ್ಗಳನ್ನು ಭಾರತ ವಾಯುಮಂಡಲದಲ್ಲೇ ನಿರ್ವೀರ್ಯಗೊಳಿಸಿ ಅದಕ್ಕೆ ತಕ್ಕ ಉತ್ತರವಾಗಿ ಹೆಚ್ಚಿನ ದಾಳಿ ನಡೆಸಿದೆ.
ಪಾಕ್ ಮಣ್ಣಿನಲ್ಲಿ ಭಯೋತ್ಪಾದನೆ ಬೆಳೆಯುತ್ತಿರುವುದು ಭಾರತವನ್ನು ಗುರಿಯಾಗಿಸಿಕೊಂಡಾಗಿದೆ ಎಂಬ ಪರಿಜ್ಞಾನದೊಂದಿಗೆ ಅಲ್ಲಿರುವ ಸರ್ವ ಭಯೋತ್ಪಾದಕ ಕೇಂದ್ರಗಳನ್ನು ಸರ್ವ ಶಕ್ತಿಯನ್ನು ಉಪಯೋಗಿಸಿ ಸರ್ವನಾಶ ಮಾಡುವ ಕೆಲಸಕ್ಕೆ ಇನ್ನೂ ತಡೆಯಾಗಬಾರದು. ಅದಕ್ಕಾಗಿ ರಾಜತಾಂತ್ರಿಕವಾಗಿ ವಿವಿಧ ದೇಶಗಳ ಬೆಂಬಲ ಪಡೆಯಬೇಕಾಗುತ್ತದೆ. ಪೆಹಲ್ಗಾಮ್ ದಾಳಿಯ ಬಳಿಕ ಹಲವು ದೇಶಗಳು ಅದನ್ನು ಖಂಡಿಸಿದ ರೀತಿ ಭಾರತದ ಪ್ರತ್ಯುತ್ತರಕ್ಕೂ ಅದೇ ಬೆಂಬಲ ಲಭ್ಯವಾಗುತ್ತಿದೆ. ಆದರೆ ಭಾರತ - ಪಾಕ್ ವಿಷಯದಲ್ಲಿ ಎಂದಿಗೂ ಪಾಕಿಸ್ತಾನ ಪರವಾಗಿ ನಿಲುವು ತಾಳುವ ಚೀನಾ ಈ ಸಂದರ್ಭದಲ್ಲೂ ತನ್ನ ಚಾಳಿ ಮುಂದುವರಿಸಿದೆ.
ಭಾರತದ ಅಖಂಡತೆಗೆ, ಆತ್ಮವಿಶ್ವಾಸಕ್ಕೆ ಬೇಕಾಗಿ ನಾವು ಬೆನ್ನಿಗೆ ಬೆನ್ನು ಕೊಟ್ಟು ನಿಲ್ಲಬೇಕೆಂದು ಹಾಗೂ ಭಯೋತ್ಪಾದನೆ ವಿರುದ್ಧ ರಾಜಿಯಿಲ್ಲದ ಹೋರಾಟ ನಡಸಬೇಕೆಂಬ ಸಂದೇಶ ಭಾರತೀಯ ಸೇನೆಯ ಹೆಜ್ಜೆಗಳು ನಮಗೆ ಸ್ಪಷ್ಟ ಸಂದೇಶ ನೀಡುತ್ತಿದೆ. ಈ ಸಂದರ್ಭ ರಾಜಕೀಯ ಭಿನ್ನಮತ ದೂರಮಾಡಿ ದೇಶದ ಸುರಕ್ಷತೆಯೇ ಪರಮ ಪ್ರಧಾನ ಎಂಬ ಪ್ರಜ್ಞೆ ಎಲ್ಲಿರಲ್ಲಿರಲಿ.
-ಉನೈಸ್ ಹುಂಡಿ ಮೊ. ೯೯೮೦೮೬೪೫೨೪