ವೀರಾಜಪೇಟೆ, ಮೇ ೧೨: ವೀರಾಜಪೇಟೆ ಪಟ್ಟಣದ ಮಹಿಳಾ ಸಮಾಜದಿಂದ ಬೇಟೋಳಿ ಅಂಗನವಾಡಿವರೆಗೆ ತೆರಳುವ ರಸ್ತೆಗೆ ಮಾಜಿ ಮಂತ್ರಿ ಹಾಗೂ ಶಿಕ್ಷಣ ತಜ್ಞ, ಹೆಸರನ್ನಿಡಲಾಗಿದ್ದು, ಪಟ್ಟಡ ಸಿ. ಉತ್ತಯ್ಯ ಅವರ ಜ್ಞಾಪಕಾರ್ಥವಾಗಿ ವೀರಾಜಪೇಟೆ ಮಹಿಳಾ ಸಮಾಜದ ಮುಂಭಾಗದ ರಸ್ತೆಯಲ್ಲಿ ಪಟ್ಟಡ ಕುಟುಂಬಸ್ಥರು ನಿರ್ಮಿಸಿದ ನಾಮಫಲಕವನ್ನು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು.

ಬಳಿಕ ಶಾಸಕರು, ಪಟ್ಟಡ ಐನ್‌ಮನೆಗೆ ಭೇಟಿ ನೀಡಿದರು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಪಟ್ಟಡ ಕುಟುಂಬಸ್ಥರು ಹಾಗೂ ಉತ್ತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಿದರು. ಐನ್‌ಮನೆ ಎಂಬುದು ಕೊಡವ ಸಂಸ್ಕöÈತಿಯಲ್ಲಿ ಪ್ರತಿಷ್ಠೆಯ ವಿಷಯವಾಗಿದೆ ಎಂದರು.

ನಮ್ಮ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಕರೆ ನೀಡಿದರು. ಪಟ್ಟಡ ಕುಟುಂಬದ ಅಧ್ಯಕ್ಷ ಪೂವಣ್ಣ ಮಾತನಾಡಿ ನಮ್ಮ ಕುಟುಂಬದ ಹಿರಿಯರು, ಮಾಜಿ ಮಂತ್ರಿ ಹಾಗೂ ಶಿಕ್ಷಣ ತಜ್ಞ ಪಟ್ಟಡ ಸಿ ಉತ್ತಯ್ಯ ಅವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನು ವೀರಾಜಪೇಟೆ ಪಟ್ಟಣದ ಮಹಿಳಾ ಸಮಾಜದಿಂದ ಬೇಟೋಳಿ ಅಂಗನವಾಡಿವರೆಗೆ ತೆರಳುವ ರಸ್ತೆಗೆ ಇಡಬೇಕೆಂದು ಕುಟುಂಬದಲ್ಲಿ ತೀರ್ಮಾನಿಸಲಾಗಿತ್ತು. ಇಂದು ಅದು ನೆರವೇರಿದೆ ಎಂದರು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಟ್ಟಡ ಕುಟುಂಬಸ್ಥರೂ ಆದ, ಪಟ್ಟಡ ರಂಜಿ ಪೂಣಚ್ಚ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಧನು ಉತ್ತಯ್ಯ, ಸಮಿತಿ ಸದಸ್ಯರುಗಳಾದ ಮೋಹನ್ ಮುತ್ತಪ್ಪ, ಕವಿತಾ ಕಾರ್ಯಪ್ಪ, ಪ್ರಮೀಳಾ ಬೋಪಣ್ಣ, ಜ್ಯೋತಿ ರಾಜನ್ ಸೇರಿದಂತೆ ಪಟ್ಟಡ ಕುಟುಂಬದ ಹಿರಿಯರು, ಕುಟುಂಬಸ್ಥರು, ಇನ್ನಿತರರು ಹಾಜರಿದ್ದರು.

ರಸ್ತೆ ನಾಮಫಲಕ ಲೋಕಾರ್ಪಣೆ ಸಂದರ್ಭ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರುಗಳು, ಸ್ಥಳೀಯರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.