ಗೋಣಿಕೊಪ್ಪಲು, ಮೇ ೧೨: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಅಂಗವಾಗಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್‌ನಲ್ಲಿ ಸೋಮವಾರ ಮೂರು ತಂಡಗಳು ಮುನ್ನಡೆ ಸಾಧಿಸಿದವು.

ಮಣವಟ್ಟಿರ ವಿರುದ್ಧ ಮಂಡAಗಡ ಪರಾಭವಗೊಂಡಿತು. ಮಣವಟ್ಟಿರ ೩ ವಿಕೆಟ್ ನಷ್ಟಕ್ಕೆ ೫೨ ರನ್ ಬಾರಿಸಿತು. ಮಂಡAಗಡ ೪ ವಿಕೆಟ್ ಕಳೆದುಕೊಂಡು ೨೩ ರನ್ ದಾಖಲಿಸಲು ಶಕ್ತವಾಗಿ ಸೋಲಿಗೆ ಶರಣಾಯಿತು.

ಮಾಚಿಮಂಡ ವಿರುದ್ಧ ಮಾಳೇಟಿರ (ಕೆದಮುಳ್ಳೂರು) ಭರ್ಜರಿ ೬೭ ರನ್ ಅಂತರದ ಗೆಲುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ ೨ ವಿಕೆಟ್ ಕಳೆದುಕೊಂಡು ೧೦೭ ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಮಾಚಿಮಂಡ ೪ ವಿಕೆಟ್ ಕಳೆದುಕೊಂಡು ಕೇವಲ ೪೬ ರನ್ ಕಲೆ ಹಾಕಿ ಸೋಲು ಅನುಭವಿಸಿತು.

ಆತಿಥೇಯ ಚೆಕ್ಕೇರ ಮೂಕಳೇರ ವಿರುದ್ಧ ಗೆದ್ದು ಬೀಗಿತು. ಚೆಕ್ಕೇರ ೧ ವಿಕೆಟ್ ಕಳೆದುಕೊಂಡು ೫೩ ರನ್ ದಾಖಲಿಸಿತು. ಮೂಕಳೇರ ೪ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿ ಪರಾಜಿತಗೊಂಡು ಪಂದ್ಯಾಟದಿAದ ನಿರ್ಗಮಿಸಿತು.