ಪಾಲಿಬೆಟ್ಟ, ಮೇ ೧೨ : ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಪಾಲಿಬೆಟ್ಟದ ಗಣಪತಿ ದೇವಸ್ಥಾನ ಹಾಗೂ ಲೂಡ್ಸ್ ಮಾತ ಚರ್ಚ್ ಮತ್ತು ಆರ್ಕಾಡ್ ಬಾಬಾ ದರ್ಗಾದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

ಮಾಜಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಉಗ್ರರನ್ನು ಸಂಪೂರ್ಣ ಮಟ್ಟ ಹಾಕಲು ಭಾರತದ ಸೈನಿಕರಿಗೆ ಎಲ್ಲರೂ ನಿಲ್ಲಬೇಕೆಂದರು.

ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ದೂಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಚರ್ಚ್ ಫಾದರ್ ಮರಿಯ ಜಾರ್ಜ್, ತಮಿಳು ಸಂಘದ ಜಿಲ್ಲಾಧ್ಯಕ್ಷ ಮೈಕಲ್, ತಾಲೂಕು ಭಾಜಪ ಸಮಿತಿ ಸದಸ್ಯ ಪ್ರಸಾದ್ ಕುಮಾರ್, ಆಟೋ ಚಾಲಕರ ಸಂಘದ ಕ್ರೀಡಾ ಸಮಿತಿ ಅಧ್ಯಕ್ಷ ಪವನ್ ಕುಮಾರ್, ಪ್ರಮುಖರಾದ ಸಿಯಾದ್, ವಿನ್ಸೆಂಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ, ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರು ಹಾಜರಿದ್ದರು.