ಗೋಣಿಕೊಪ್ಪಲು, ಮೇ ೧೨: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩೬ನೇ ದಿನ ೮ ತಂಡಗಳು ಮುನ್ನಡೆ ಸಾಧಿಸಿದವು.

ಬೊಪ್ಪಂಡ ವಿರುದ್ಧ ಆದೇಂಗಡ ಜಯ ಸಾಧಿಸಿತು. ಬೊಪ್ಪಂಡ ೬ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿತು. ಆದೇಂಗಡ ೩ ವಿಕೆಟ್ ಕಳೆದುಕೊಂಡು ೫೫ ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಕುಪ್ಪಣಮಾಡ ವಿರುದ್ಧ ಮುದ್ದಿಯಡ ಪರಾಭವಗೊಂಡಿತು. ಮೊದಲು ಬ್ಯಾಟ್ ಮಾಡಿದ ಮುದ್ದಿಯಡ ೩ ವಿಕೆಟ್ ಕಳೆದುಕೊಂಡು ೪೭ ರನ್ ಸಂಪಾದಿಸಿತು. ಗುರಿ ಬೆನ್ನತ್ತಿದ ಕುಪ್ಪಣಮಾಡ ೪.೪ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು.

ನಡಿಕೇರಿಯಂಡ ತಂಡವನ್ನು ಮಣವಟ್ಟಿರ ಮಣಿಸಿ ಮುಂದಿನ ಹಂತ ಪ್ರವೇಶಿಸಿತು. ನಡಿಕೇರಿಯಂಡ ೪ ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿತು. ಮಣವಟ್ಟಿರ ೫ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿ ಜಯ ಸಾಧಿಸಿತು.

ಕಾಡ್ಯಮಾಡ ವಿರುದ್ಧ ಮುಕ್ಕಾಟಿರ (ಹರಿಹರ) ಒಂದು ರನ್ ಅಂತರದ ಗೆಲುವು ಪಡೆದುಕೊಂಡಿತು. ೬ ವಿಕೆಟ್ ಕಳೆದುಕೊಂಡು ೭೦ ರನ್ ಗಳಿಸಿತು. ಗುರಿ ಬೆನ್ನತ್ತಿದ ೫.೫ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೭೧ ರನ್ ಸಂಪಾದಿಸಿ ಗೆಲುವಿನ ರುಚಿ ಸವಿಯಿತು.

ಅರಮಣಮಾಡ ವಿರುದ್ಧ ಮೋಟನಾಳಿರ ೨೬ ರನ್ ಅಂತರದ ಗೆಲುವು ದಾಖಲಿಸಿತು. ಮೋಟನಾಳಿರ ೩ ವಿಕೆಟ್ ಕಳೆದುಕೊಂಡು ೮೦ ರನ್ ಗಳಿಸಿತು. ಅರಮಣಮಾಡ ೫ ವಿಕೆಟ್ ಕಳೆದುಕೊಂಡು ೫೪ ರನ್ ಗಳಿಸಿ ಸೋಲಿಗೊಳಗಾಯಿತು.

ಕೋಳೇರ ವಿರುದ್ಧ ಚಿಮ್ಮಣಮಾಡ ವಿಜಯಿಯಾಯಿತು. ಕೋಳೆರ ೫ ವಿಕೆಟ್ ಕಳೆದುಕೊಂಡು ೫೧ ರನ್ ಸಂಪಾದಿಸಿತು. ಚಿಮ್ಮಣಮಾಡ ೪ ವಿಕೆಟ್ ಕಳೆದುಕೊಂಡು ೫೩ ರನ್ ಸಂಪಾದಿಸಿ ಗುರಿ ಸಾಧಿಸುವಲ್ಲಿ ಯಶಸ್ವಿಯಾಯಿತು.

ನೆಲ್ಲೀರ ವಿರುದ್ಧ ಕಾಣತಂಡ ಜಯ ಪಡೆಯಿತು. ಮೊದಲು ಬ್ಯಾಟ್ ಮಾಡಿದ ನೆಲ್ಲೀರ ೪ ವಿಕೆಟ್ ಕಳೆದುಕೊಂಡು ೪೯ ರನ್ ಕಲೆಹಾಕಿತು. ಕಾಣತಂಡ ೨ ವಿಕೆಟ್ ಕಳೆದುಕೊಂಡು ೫೧ ರನ್ ಬಾರಿಸಿ ವಿಜಯಿಯಾಯಿತು.

ಮೋಟನಾಳಿರ ವಿರುದ್ಧ ಚಿಮ್ಮಣಮಾಡ ಜಯ ಪಡೆಯಿತು. ಮೋಟನಾಳಿರ ೬ ವಿಕೆಟ್ ಕಳೆದುಕೊಂಡು ೨೬ ರನ್ ಪೇರಿಸಿತು. ಗುರಿ ಬೆನ್ನತ್ತಿದ ಚಿಮ್ಮಣಮಾಡ ೪ ವಿಕೆಟ್ ಕಳೆದುಕೊಂಡು ೨೭ ರನ್ ಗಳಿಸಿ ಗೆಲುವಿನ ನಗೆ ಬೀರಿತು. - ಹೆಚ್.ಕೆ. ಜಗದೀಶ್