ಮಡಿಕೇರಿ, ಮೇ ೧೨: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಾರಿಕೆ ಮತ್ತು ಮಂಞAಡ್ರ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಬಾರಿಕೆ ಹಾಗೂ ದೇವಜನ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಕೆ ೨ ಗೋಲು ಗಳಿಸಿ ಜಯಗಳಿಸಿತು.

ಮುಕ್ಕಾಟಿ(ಅಪ್ಪಂಗಳ) ಹಾಗೂ ಪೊಡನೋಳನ ನಡುವಿನ ಪಂದ್ಯದಲ್ಲಿ ಪೊಡನೋಳನ ಜಯಗೊಳಿಸಿತು. ಮಂಞAಡ್ರ ಹಾಗೂ ಕುತ್ತಾö್ಯಡಿ ತಂಡಗಳ ನಡುವಿನ ಪಂದ್ಯದಲ್ಲಿ ಮಂಞAಡ್ರ ಜಯಗಳಿಸಿತು. ಕಡ್ಯದ ಹಾಗೂ ಯಾಲದಾಳು ನಡುವಿನ ಹೋರಾಟದಲ್ಲಿ ಕಡ್ಯದ ವಿಜಯಿಯಾಯಿತು.

ಮಂಞAಡ್ರ ಹಾಗೂ ನಂಗಾರು ತಂಡಗಳ ನಡುವಿನ ಪಂದ್ಯದಲ್ಲಿ ಮಂಞAಡ್ರ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಬಾರಿಕೆ ಹಾಗೂ ಪೊಡನೋಳನ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಕೆ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.