ಮಡಿಕೇರಿ, ಮೇ ೧೨: ಈಗಾಗಲೇ ತಲಕಾವೆರಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಕೋಟ್ಯಧಿಕ ಅತಿ ರುದ್ರ ಜಪಯಜ್ಞ ಪ್ರಾರಂಭಗೊAಡಿದೆ. ಈ ಸಂದರ್ಭ ಕೊಡಗಿನ ತಲಕಾವೇರಿ, ಮಡಿಕೇರಿ, ಕಣಿವೆ ಸೇರಿದಂತೆ ಭಾರತ ದೇಶದಾದ್ಯಂತ ವಿಶ್ವ ಕಲ್ಯಾಣದ ಹಿತದೃಷ್ಟಿಯಿಂದ ಕೋಟಿಗೂ ಅಧಿಕ ಅತಿರುದ್ರ ಜಪÀ ಯಜ್ಞದ ಗುರಿಯನ್ನು ಇದರ ಮೂಲ ಪ್ರೇರಕರಾದ ಮೈಸೂರಿನ ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜ್ ಹೊಂದಿದ್ದು ಇವರೊಂದಿಗೆ ಬೆಂಗಳೂರಿನ ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಸಲು ಕೊಡಗಿನಲ್ಲಿಯೂ ಸಮಿತಿಯೊಂದನ್ನು ರಚಿಸಿ ಈಗಾಗಲೇ ಶುಭ ಕಾರ್ಯಾರಂಭ ಮಾಡಲಾಗಿದೆ. ಮುಖ್ಯ ಕಾರ್ಯಕ್ರಮಗಳು ಈ ಕೆಳಗಿನಂತಿವೆ.

ತಾ ೧೧ ರಿಂದ ಪ್ರಾರಂಭಗೊAಡ ಈ ಮಹಾನ್ ಧಾರ್ಮಿಕ ಕಾರ್ಯ ತಾ ೨೧ರವರೆಗೆ ಕೊಡಗು ಜಿಲ್ಲೆಯಲ್ಲಿ ‘ಅತಿರುದ್ರ ಜಪಯಜ್ಞ' ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಜಪ ಕೈಂಕರ್ಯವು ತಾ ೧೯ ರ ವರೆಗೆ ತಲಕಾವೇರಿಯಲ್ಲಿ ನಡೆಯುತ್ತ್ತದೆ. ರಾಜ್ಯಾದ್ಯಂತ ಹಾಗೂ ಹೊರರಾಜ್ಯದಿಂದ ಆಗಮಿಸಿರುವ ಸುಮಾರು ೫೦ ಮಂದಿ ಋತ್ವಿಜರಿಂದ ೯ ದಿನಗಳ ಪರ್ಯಂತ ಅತಿರುದ್ರ ಜಪ ನಡೆಯುತ್ತದೆ. ಪ್ರತಿದಿನ ಮೂರು ಆವರ್ತಗಳಲ್ಲಿ ೩೩ ಬಾರಿ ಶ್ರೀರುದ್ರ ಜಪ ಪಠಿಸಲ್ಪಡುತ್ತದೆ.

ಬಳಿಕ ತಾ. ೨೦ ರÀಂದು ಮಡಿಕೇರಿಯ ಶ್ರೀ ಲಕ್ಷಿö್ಮÃನೃಸಿಂಹ ಕಲ್ಯಾಣ ಮಂಟಪದಲ್ಲಿ, ಶ್ರೀರುದ್ರ ಹೋಮ ಜಪಯಜ್ಞ ಏರ್ಪಟ್ಟಿದೆ. ೩ ಆವರ್ತ ಜಪ ಪಠಿಸಲಾಗುತ್ತದೆ. ಅಲ್ಲದೆ, ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ. ಅನ್ನ ಸಂತರ್ಪಣೆಯಿದೆ.

ಬಳಿಕ ತಾ. ೨೧ರಂದು ಕುಶಾಲನಗರ ಸನಿಹದ ಕಾವೇರಿ ತೀರದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಶ್ರೀ ಚಂಡಿಕಾ ಹೋಮ ಏರ್ಪಟ್ಟಿದೆ. ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜರವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ. ೨ ಆವರ್ತದ ಶ್ರೀರುದ್ರ ಜಪ ಪಠಣದ ಬಳಿಕ ಮಹಾಪ್ರಸಾದ (ಕುಶಾಲನಗರ ಶ್ರೀ ಆರ್ಯ ವೈಶ್ಯ ಸಮುದಾಯದ ಸೇವೆ) ವಿನಿಯೋಗ ನಡೆಯಲಿದೆ. ಅಂದು ಅತಿ ರುದ್ರ ಜಪಯಜ್ಞವು ಕೊಡಗಿನಲ್ಲಿ ಸಾಂಗತಗೊಳ್ಳಲಿದೆ.

ಗುರೂಜಿಯವರ ಕಿರು ಪರಿಚಯ

ದೇಶದ ಮೂಲೆ ಮೂಲೆಗಳಲ್ಲಿ ಅತಿರುದ್ರ ಜಪಯಜ್ಞ ನಡೆಸುತ್ತಿರುವ ಮುಖ್ಯ ರೂವಾರಿ ಹಾಗೂ ಪ್ರೇರಕ ಶಕ್ತಿಯೆನಿಸಿರುವ ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜ ಸ್ವಾಮೀಜಿ ಅವರ ಕಿರು ಪರಿಚಯವನ್ನು ಈ ಸಂದರ್ಭ ಮಾಡುವ ಅವಶ್ಯಕತೆಯಿದೆ.

ತಾ. ೭.೧.೧೯೯೨ರಂದು ಮೈಸೂರಿನಲ್ಲಿ ಡಾ. ರವೀಂದ್ರ ಹಾಗೂ ಶ್ರೀಮತಿ ಅಂಬಿಕಾ ದಂಪತಿಯ ಸುಪುತ್ರರಾಗಿ ಜನಿಸಿದರು. ೧೯.೫.೧೯೯೮ರ ನಡು ರಾತ್ರಿ ೨ ಗಂಟೆ ೪ ನಿಮಿಷದಲ್ಲಿ ಸದ್ಗುರು ಶ್ರೀಶಂಕರಲಿAಗ ಭಗವಾನರ ಸ್ವಯಂ ಜ್ಯೋತಿಯು ಶ್ರೀ ಶ್ರೀಕಾಂತಾನAದರ ಹೃದಯ ಗುಹೆಯೊಳಗೆ ಪ್ರವೇಶಿಸಿತು. ಹುಟ್ಟುವಾಗಲೇ ಕೈಯಲ್ಲಿ ಚಿನ್ಮುದ್ರೆ ಇಟ್ಟುಕೊಂಡು ಜನಿಸಿದ ಈ ದಿವ್ಯ ಶಿಶುವಿನೊಂದಿಗೆ ಹೆತ್ತವರು ಸಖರಾಯಪಟ್ಟಣದ ಗುರುನಾಥರಾದ ಶ್ರೀ ವೆಂಕಟಾಚಲ ಅವಧೂತರ ದರ್ಶನಕ್ಕೆ ತೆರಳಿದ್ದರು.

ಆಗ ಅವಧೂತರು ಪುಟ್ಟ ಕಂದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅದರ ಪಾದಗಳನ್ನು ನೀವುತ್ತಾ ಈ ಮಗುವಿನ ಸಾಧನೆಗಳೆಲ್ಲಾ ಪೂರ್ವಜನ್ಮದಲ್ಲೇ ಮುಗಿದಿವೆ. ಮಗುವನ್ನು ಆರು ವರ್ಷದವರೆಗೂ ಕೆಂಪು ಬಣ್ಣದ ರೇಶಿಮೆ ವಸ್ತçದ ಮೇಲೆ ಮಲಗಿಸಿ, ಲಕ್ಷಾಂತರ ಮಂದಿ ಈ ಗುರುವಿನ ಭಕ್ತರಾಗಿ ಅನ್ನೋದ್ಧಾರದ ಹಾದಿಯಲ್ಲಿ ಸಾಗುತ್ತಾರೆ ಎಂಬ ದಿವ್ಯವಾಣಿಯನ್ನು ಉಚ್ಚರಿಸಿ ಹರಸಿ ಕಳುಹಿಸಿದ್ದರು. ಆ ದೈವ ವಾಣಿ ಬಳಿಕ ನಿಜವಾಗಿದೆ. ಇದೀಗ ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜ ಸ್ವಾಮೀಜಿ ಅವರು ೮ ಆಶ್ರಮಗಳನ್ನು ಸ್ಥಾಪಿಸಿ ಅಸಂಖ್ಯ ಭಕ್ತ ಸಮೂಹಕ್ಕೆ ಸನ್ಮಾರ್ಗ ದರ್ಶನ ಮಾಡುತ್ತಾ, ದೀನರಾಗಿ ಬಂದವರ ಸಂಕಷ್ಟಗಳನ್ನೆಲ್ಲಾ ದೂರ ಮಾಡುತ್ತಿದ್ದಾರೆ. ಗುರೂಜಿಯವರು ಲೋಕಕಲ್ಯಾಣಾರ್ಥವಾಗಿ ಅತಿರುದ್ರ ಕೋಟ್ಯಧಿಕ ಜಪಯಜ್ಞ ಹಮ್ಮಿಕೊಂಡು ರಾಜ್ಯ ಹಾಗೂ ಹೊರರಾಜ್ಯದ ಅನೇಕ ಕಡೆ ಜಪಯಜ್ಞ ಮುನ್ನಡೆಸುತ್ತಿದ್ದಾರೆ.

ಈಗ ಅಗಸ್ತö್ಯರ ತಪೋಭೂಮಿ, ಕಾವೇರಿ ಮಾತೆಯ ಉಗಮ ಸ್ಥಾನ ಕೊಡಗಿನಲ್ಲಿ ೧೧ ದಿನಗಳ ಅತಿರುದ್ರ ಜಪಯಜ್ಞವನ್ನು ಕೈಗೊಂಡಿದ್ದಾರೆ.

ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿರುವ ಈ ಜಪಯಜ್ಞದಿಂದ ಶ್ರೀ ರುದ್ರ ದೇವರ ಕೃಪಾ ಛತ್ರವು ಲೋಕಕ್ಕೆ ಲಭಿಸಲಿದೆ. ಗುರುಗಳ ಈ ಮಹಾ ಸಂಕಲ್ಪದಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡು ಕೊಡಗಿನ ಜನತೆ ಕೂಡ ದೈವಿಕ ಶಕ್ತಿಯನ್ನು ಎಲ್ಲರೂ ಜಾಗೃತಗೊಳಿಸಿಕೊಳ್ಳಬೇಕೆಂದು ಕೊಡಗಿನ ಅತಿರುದ್ರ ಜಪಯಜ್ಞ ಸಮಿತಿ ಮನವಿ ಮಾಡಿದೆ. ಹಾಗಿದ್ದರೆ ಕೊಡಗಿನ ಈ ಸಮಿತಿಯಲ್ಲಿ ಯರ‍್ಯಾರಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಗೌರವಾಧ್ಯಕ್ಷರಾಗಿ ಮಡಿಕೇರಿಯ ಹಿರಿಯ ಲೆಕ್ಕಪರಿಶೋಧಕÀ ಮಿತ್ತೂರು ಈಶ್ವರ ಭಟ್, ಕಾರ್ಯಾಧ್ಯಕ್ಷರಾಗಿ ಮಡಿಕೇರಿ ಮೂಡಾದ ಮಾಜಿ ಅಧ್ಯಕ್ಷÀ ರಮೇಶ್ ಹೊಳ್ಳ, ಹಿರಿಯ ಉಪಾಧ್ಯಕ್ಷರುಗಳಾಗಿ ಮಡಿಕೇರಿಯ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಮೂಗೂರು ರಾಮಚಂದ್ರ, ಕುಶಾಲನಗರದ ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿಯ ಅಧ್ಯಕ್ಷÀ ರಾಜಶೇಖರ್, ಭಾಗಮಂಡಲ-ತಲಕಾವೇರಿ ದೇವಾಲಯಗಳ ವಿಶ್ರಾಂತ ವ್ಯವಸ್ಥಾಪಕ ಎಸ್. ಎಸ್. ಸಂಪತ್ ಕುಮಾರ್ ಸರಳಾಯ, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಆರ್ಚಕÀ ಹರೀಶ್ ಭಟ್ ಇವರುಗಳಿದ್ದಾರೆ.

ಅಲ್ಲದೆ, ಪೋಷಕರುಗಳಾಗಿ ಮಡಿಕೇರಿಯ ಹಿರಿಯ ಲೆಕ್ಕಪರಿಶೋಧಕರಾದ ಅನಂತ ಸುಬ್ಬರಾವ್, ಮಡಿಕೇರಿ ಗಣೇಶ್ ಮೆಡಿಕಲ್ಸ್ನ ಪುರುಷೋತ್ತಮ್, ಕಾರ್ಯಕಾರಿ ಸಂಚಾಲನ ಸಮಿತಿಯಲ್ಲಿ ಮಡಿಕೇರಿಯ ಉದ್ಯಮಿ ಸುಬ್ರಹ್ಮಣ್ಯ ಹೊಳ್ಳ, ಕುಶಾಲನಗರದ ವಕೀಲ ನಾಗೇಂದ್ರ ಬಾಬು, ಸೋಮವಾರಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷÀ ಎಸ್.ಡಿ. ವಿಜೇತ್,ವೀರಾಜಪೇಟೆ ತಾಲೂಕಿನ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ, ಕೊಡಗರಹಳ್ಳಿಯ ಪತ್ರಕರ್ತ ಬಿ.ಸಿ. ದಿನೇಶ್ ಇವರುಗಳಿದ್ದಾರೆ. ಅಲ್ಲದೆ ಜಪಯಜ್ಞ ಪ್ರತಿನಿಧಿಯಾಗಿ ಎಸಳೂರು ಉದಯಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.