ಕೂಡಿಗೆ, ಮೇ ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ, ಕೋಟೆ, ಗ್ರಾಮಗಳ ವ್ಯಾಪ್ತಿಯಲ್ಲಿರುವ ನೂರಾರು ಎಕರೆಗಳಷ್ಟು ಪ್ರದೇಶ ದಲ್ಲಿರುವ ದಂಡಿನಮ್ಮ ಕೆರೆಯ ಅಭಿವೃದ್ಧಿ ಪೂರಕವಾದ ಯೋಜನೆ ಗಳನ್ನು ಕಾರ್ಯರೂಪಕ್ಕೆ ತರುವ ಹಿನ್ನೆಲೆ ಅದಕ್ಕೆ ಸಂಬAಧಿಸಿದ ಕೆರೆ ಜಾಗದ ಸಂಪೂರ್ಣವಾದ ಸರ್ವೆ ನಡೆಸಿ ಅದರ ಮೂಲಕ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆಯನ್ನು ತಯಾರಿಸಿ ನೀರಾವರಿ ಇಲಾಖೆಯ ಮುಖೇನ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ ತಿಳಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಸೂಚನೆ ಮೇರೆಗೆ ನೂರಾರು ಎಕರೆ ಪ್ರದೇಶ ದಲ್ಲಿರುವ ಕೆರೆಯ ಅಭಿವೃದ್ಧಿಗೆ ಸಂಬAಧಿಸಿದAತೆ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ ತಮ್ಮ ಇಂಜಿನಿಯರ್ ತಂಡದೊAದಿಗೆ ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಭಿವೃದ್ಧಿಪಡಿಸಲು ಚಿಂತನೆ ಹರಿಸಿದ್ದಾರೆ.
ದಂಡಿನಮ್ಮ ಕೆರೆಯು ಹಾರಂಗಿ ಮುಖ್ಯ ನಾಲೆಯ ಕೆಳಭಾಗದಲ್ಲಿದ್ದು, ಮತ್ತು ಹಾರಂಗಿ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯ ಕೆರೆಯಾಗಿರುವ ಹಿನ್ನೆಲೆಯಲ್ಲಿ ಕೆರೆಯ ನೀರು ಬಳಕೆ ಮಾಡಿ ನೂರಾರು ಎಕರೆಗಳಷ್ಟು ಪ್ರದೇಶದ ರೈತರು ಬೇಸಾಯ ಮಾಡು ತ್ತಿರುವದರಿಂದಾಗಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಈಗಾಗಲೇ ಕಂಡುಬರುತ್ತಿರುವ ಹಿನ್ನೆಲೆ ಸರಕಾರದ ನಿಯಮಾನುಸಾರ ಸರ್ವೆ ನಡೆಸಿ ಒತ್ತುವರಿ ಕೆರೆಯ ಜಾಗವನ್ನು ತೆರವುಗೊಳಿಸಿ ಅದಕ್ಕೆ ಸಂಬAಧಿಸಿ ದಂತೆ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಕೆರೆಯ ಜಾಗದಲ್ಲಿ ತಮ್ಮ ಜಮೀನು ಸೇರ್ಪಡೆಗೊಂಡಿದೆ ಎಂಬ ಕೆಲವು ರೈತರ ಮನವಿಯನ್ನು ಸ್ವೀಕರಿಸಿ, ಅದಕ್ಕೆ ಅನುಗುಣವಾಗಿ ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆ ಸಹಯೋಗ ದೊಂದಿಗೆ ಸರ್ವೆ ಕಾರ್ಯ ನಡೆಸಿ ರೈತರ ಜಮೀನು ಸರಕಾರಿ ಕೆರೆ ಜಾಗದಲ್ಲಿ ಸೇರ್ಪಡೆಗೊಂಡಿದ್ದರೆ ಮೇಲ್ವಿಚಾರಣೆ ನಡೆಸಿ ಉನ್ನತಮಟ್ಟದ ಅಧಿಕಾರಿಗಳ ಸಭೆಯ ತೀರ್ಮಾನ ನಂತರ ಬಿಟ್ಟುಕೊಡುವ ಕಾರ್ಯವಾಗುವುದು. ಸರಕಾರದ ನಿಯಮಾನುಸಾರ ಮೊದಲ ಅಧ್ಯತೆಯಾಗಿ ದಂಡಿನಮ್ಮ ಕೆರೆ ಅಭಿವೃದ್ಧಿಗೆ ಸರ್ವೆ ನಡೆಸಿ ಕೆರೆ ಜಾಗದ ಹದ್ದುಬಸ್ತು ಗುರುತಿಸುವಿಕೆ ಮಾಡಲಾಗುವುದು ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.