ಮಡಿಕೇರಿ, ಮೇ ೯: ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತ್ತಿ ಹೋಬಳಿ ಇವರ ವತಿಯಿಂದ ತೃತೀಯ ಬಾರಿಗೆ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯವು ತಾ. ೧೭ ಹಾಗೂ ೧೮ ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಡೆಯಲಿದೆ. ಮೊಗೇರ ಬಾಂಧವರಿಗೆ ಮಾತ್ರ ಅವಕಾಶ ಇದ್ದು ಒಟ್ಟು ೪೦ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಕೂಟದ ವಿನ್ನರ್ಸ್ ತಂಡಕ್ಕೆ ೩೩,೩೩೩ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ೨೨,೨೨೨ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೆಯೇ ವೈಯಕ್ತಿಕ ಟ್ರೋಫಿ ನೀಡಲಾಗುತ್ತದೆ.

ಕ್ರೀಡಾಕೂಟದ ಉದ್ಘಾಟನೆಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಗಣೇಶ್ ಪಿ.ಸಿ. ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ರಾಮು ಪಿ. ಎನ್. ಕೊಡಗು ಮೊಗೇರ ಜಿಲ್ಲಾ ಅಧ್ಯಕ್ಷ ಜನಾರ್ಧನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರವಿ ಪಿ.ಎಂ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ, ಸಮಾಜದ ಗೌರವ ಅಧ್ಯಕ್ಷ ಗೌತಮ್, ಶಿವಪ್ಪ, ಅಕ್ಕಮ್ಮ ಮೂರ್ತಿ, ಸದಾನಂದ ಮಾಸ್ಟರ್, ವಸಂತ್, ಪಿ.ಕೆ. ಚಂದ್ರು, ದಾಮೋದರ್ ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟದ ಪ್ರಮುಖವಾಗಿ ಆಯೋಜಕರು ಹಾಗೂ ಕೊಡಗು ಪತ್ರಕರ್ತರ ಸಂಘದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ರಾಜ್ಯಮಟ್ಟದ ಪಂದ್ಯ ಆಗಿರುವದರಿಂದ ತಂಡಗಳು ನೊಂದಾಯಿಸಲು ರಾಮು ೮೭೯೨೧೦೦೩೧೭, ಗಣೇಶ್ ೯೫೯೧೮೨೨೮೭೯, ಶಿವರಾಜ್, ೯೦೩೫೮೨೧೧೪೧, ಇವರುಗಳನ್ನು ಸಂಪರ್ಕಿಸಬಹುದಾಗಿದೆ.

-ಅಶೋಕ್ ಮಡಿಕೇರಿ