ಮಡಿಕೇರಿ : ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ನಮ್ಮ ದೇಶ ಮತ್ತು ದೇಶದ ಸೈನಿಕರಿಗೆ ಸ್ಥೆöÊರ್ಯ ತುಂಬಲು ಮತ್ತು ದೇಶಕ್ಕೆ ಜಯ ಸಿಗುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕೊಡಗು ಜಿಲ್ಲಾ ಬಿಜೆಪಿ ಕರೆಗೆ ಸ್ಪಂದಿಸಿದ ಪಕ್ಷದ ಕಾರ್ಯಕರ್ತರು ವಿಶೇಷ ಪೂಜೆ - ಪ್ರಾರ್ಥನೆ ಸಲ್ಲಿಸಿದರು. ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಡಿಕೇರಿ ನಗರ ಮಂಡಲ ಬಿಜೆಪಿ ವತಿಯಿಂದ ನಡೆದ ಪೂಜಾ ಕಾರ್ಯದಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತೀಯ ಯೋಧರ ಶ್ರೇಯೋಭಿವೃದ್ಧಿಗೆ ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಆಟೋ ಚಾಲಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜನಾರ್ದನ್, ಪಟ್ಟಣದ ವರ್ತಕ ಅರುಣ್ ಸೇರಿದಂತೆ ಇತರರು ಶ್ರೀ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದರು.

ಪೆಹಲ್ಗಾಮ್‌ನಲ್ಲಿ ಅಮಾಯಕರನ್ನು ಕೊಂದ ಪಾಕಿಸ್ತಾನಿ ಪೋಷಿತ ಉಗ್ರಗಾಮಿಗಳ ಹೆಡೆಮುರಿಕಟ್ಟಲು ಟೊಂಕಕಟ್ಟಿರುವ ಭಾರತೀಯ ಸೇನೆಗೆ ಜಯವಾಗಲಿ. ಭಾರತದ ಸೈನಿಕರಿಗೆ ಹೆಚ್ಚಿನ ಧೈರ್ಯ, ಸ್ಥೆöÊರ್ಯ ಲಭಿಸಲಿ, ನಮ್ಮ ಸೇನೆ ಹಾಗೂ ಸೈನಿಕರಿಗೆ ಯಾವುದೇ ಆಪತ್ತು ಬಾರದಿರಲಿ ಎಂದು ಶ್ರೀ ಸೋಮೇಶ್ವರ ದೇವರಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಸಿದ್ದಾಪುರ : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿರುವುದರಿಂದ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ. ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ಸಿದ್ದಾಪುರದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಿದ್ದಾಪುರದ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರೂಪೇಶ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ, ರೀನಾ ತುಳಸಿ, ಬಿಜೆಪಿ ಪ್ರಮುಖ ಮನೋಹರ್ ಇನ್ನಿತರರಿದ್ದರು.

ಕುಶಾಲನಗರದಲ್ಲಿ

ಕುಶಾಲನಗರ: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಯುತ್ತಿರುವ ಪಾಕ್ ಉಗ್ರರ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗೆ ಭಾರತೀಯ ಸೈನಿಕರಿಗೆ ಇನ್ನಷ್ಟು ಹೆಚ್ಚಿನ ಧೈರ್ಯ ತುಂಬಲು ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಮಸೀದಿಗಳಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಮಸೀದಿ ಕಮಿಟಿಯ ಅಧ್ಯಕ್ಷ ರಫೀಕ್ ತಿಳಿಸಿದ್ದಾರೆ.

ಕುಶಾಲನಗರ ಹಿಲಾಲ್ ಮಸೀದಿಯಲ್ಲಿ ಧರ್ಮ ಗುರುಗಳಾದ ಶಾಫಿ ಇರ್ಪಾನಿ ಫೈಜಿ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಮಸೀದಿ ಕಮಿಟಿ ಅಧ್ಯಕ್ಷ ಎಂಎAಎಸ್ ಹುಸೇನ್, ಕಾರ್ಯದರ್ಶಿ ಅಬ್ದುಲ್ ಮಜೀದ್ ಮತ್ತು ಸಮುದಾಯದವರು ಇದ್ದರು. ಪಟ್ಟಣದ ಹೊರ ವಲಯದಲ್ಲಿರುವ ಮಸೀದಿಗಳಲ್ಲಿ ಕೂಡ ವಿಶೇಷ ಪ್ರಾರ್ಥನೆಗಳು ನಡೆದವು.ಮಡಿಕೇರಿ: ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಸೂಚನೆಯಂತೆ ಭಾರತೀಯ ಸೈನ್ಯಕ್ಕೆ ಮನೋಸ್ಥೆöÊರ್ಯ ಹೆಚ್ಚಿಸುವ ಹಾಗೂ ಇನ್ನಷ್ಟು ಉಗ್ರಗಾಮಿಗಳನ್ನು ಸದೆಬಡಿಯಲು ದೈವದ ಅನುಗ್ರಹ ಇರಲಿ ಎಂದು ಜಿಲ್ಲೆಯ ಹಲವು ಕಡೆಯಲ್ಲಿ ದೈವಸ್ಥಾನದದಲ್ಲಿ ನಿನ್ನೆ ಮತ್ತು ಇಂದು ವಿಶೇಷವಾದ ಪೂಜೆ ಸಲ್ಲಿಸಲಾಗಿದೆ.ಗೋಣಿಕೊಪ್ಪಲು, ಮೇ.೯: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗುತ್ತಿರುವುದರಿಂದ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಭಗವಂತನ ಆರ್ಶೀವಾದ ಲಭಿಸಲಿ, ಯೋಧರಿಗೆ ಒಳಿತಾಗಲಿ, ಸೇನೆಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಪೊನ್ನಂಪೇಟೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಅಡ್ಡಂಡ ನಿಲನ್ ಮಂದಣ್ಣ ಮುಂದಾಳತ್ವದಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಭಗವಂತನಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಮುಂಜಾನೆ ಪೊನ್ನಂಪೇಟೆಯ ಬಸವೇಶ್ವರ ದೇವಾಲಯಕ್ಕೆ ಆಗಮಿಸಿದ ಶಕ್ತಿ ಕೇಂದ್ರದ ಪ್ರಮುಖರು ದೇವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧು, ಮತ್ರಂಡ ಕಬೀರ್‌ದಾಸ್, ಕೋಟೆರ ಕಿಶಾನ್ ಉತ್ತಪ್ಪ, ತೋರಿರ ವಿನು, ವಿಜಯ್ ಕುಮಾರ್, ತಿಮ್ಮ, ಸುನಿ, ಬೆಳ್ಯಪ್ಪ ಮುಂತಾದವರು ಹಾಜರಿದ್ದರು.

ಸೋಮವಾರಪೇಟೆ: ಉಗ್ರವಾದಿಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆಯ ಶ್ರೇಯಸ್ಸಿಗಾಗಿ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.

ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಪೆಹಲ್ಗಾಮ್‌ನಲ್ಲಿ ನಡೆದ ಅಮಾಯಕರ ಹತ್ಯೆಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಉಗ್ರರ ಹುಟಡಗಿಸುತ್ತಿದೆ. ನಮ್ಮ ಸೈನ್ಯ ನಮ್ಮ ಹೆಮ್ಮೆಯಾಗಿದ್ದು, ಭಾರತೀಯ ಸೇನೆಗೆ ಸದಾ ಯಶಸ್ಸು ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

ದೇಶವು ಇಂದು ದಿಟ್ಟ ನಾಯಕತ್ವದಡಿ ಮುನ್ನಡೆಯುತ್ತಿದೆ. ಪಾಕಿಸ್ತಾನ ಸಲಹುತ್ತಿರುವ ಉಗ್ರಗಾಮಿಗಳನ್ನು ಬೇರುಸಹಿತ ಕಿತ್ತೊಗೆಯುವ ಕಾರ್ಯಕ್ಕಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆ ಮುನ್ನುಗ್ಗುತ್ತಿದ್ದು, ಇಡೀ ಭಾರತೀಯರು ಸೈನ್ಯ ಹಾಗೂ ದೇಶದ ಪರವಾಗಿ ನಿಲ್ಲಬೇಕಿದೆ ಎಂದರು.

ಈ ಸಂದರ್ಭ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತ ವಿರೂಪಾಕ್ಷ, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಪಕ್ಷದ ಮುಖಂಡರಾದ ಮನುಕುಮಾರ್ ರೈ, ಹೆಚ್.ಕೆ. ಮಾದಪ್ಪ, ಎಸ್.ಆರ್. ಸೋಮೇಶ್, ಮೋಹನ್‌ದಾಸ್, ಶರತ್‌ಚಂದ್ರ, ನೇಗಳ್ಳೆ ಜೀವನ್, ಶ್ರೀನಿಧಿ ಲಿಂಗಪ್ಪ, ನತೀಶ್ ಮಂದಣ್ಣ, ಪೃಥ್ವಿ, ವರಲಕ್ಷಿö್ಮÃ ಸಿದ್ದೇಶ್ವರ್ ಸೇರಿದಂತೆ ಇತರರು ಇದ್ದರು.