ಸೋಮವಾರಪೇಟೆ, ಮೇ ೯: ಕೊಡ್ಲಿಪೇಟೆ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕಿಬ್ಬೆಟ್ಟ ಗ್ರಾಮದ ಬಳಿಯಿರುವ ಬಸ್ ತಂಗುದಾಣದ ಸಮೀಪ ಗೋಣಿಮರವೊಂದು ರಸ್ತೆಗೆ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ತಪ್ಪಿದೆ.

ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಅಸ್ತವ್ಯಸ್ಥಗೊಂಡಿದ್ದು, ಸ್ಥಳೀಯರೊಂದಿಗೆ ವಾಹನಗಳ ಮಾಲೀಕರೇ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.

ಬೆಳಗ್ಗಿನ ಸಮಯದಲ್ಲಿ ಸಾಕಷ್ಟು ವಾಹನ ಸಂಚಾರ ಇದ್ದರೂ, ಅದೃಷ್ಟವಶಾತ್ ಯಾವುದೇ ಅವಘಡಗಳು ಸಂಭವಿಸಲಿಲ್ಲ. ಇಲ್ಲಿನ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸೆಸ್ಕ್ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾರೂ ಸಹ ಸ್ಪಂದಿಸದ ಹಿನ್ನೆಲೆ, ಸಾರ್ವಜನಿಕರೇ ಮರ ತೆರವಿಗೆ ಮುಂದಾದರು.

ಒAದು ಗಂಟೆಗಳ ಕಾಲ ಕಾದು ನಿಂತಿದ್ದ ವಾಹನಗಳ ಚಾಲಕರು ಮತ್ತು ಮಾಲೀಕರೇ ಹಣ ಸಂಗ್ರಹಿಸಿ ಖಾಸಗಿ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆತಂದು ಬೃಹತ್ ಮರವನ್ನು ತುಂಡರಿಸಿದರು. ನಂತರ ಇಲಾಖೆಗಳಿಗೆ ಹಿಡಿಶಾಪ ಹಾಕಿಕೊಂಡೇ ಎಲ್ಲರೂ ಕೈಜೋಡಿಸಿ ಮರವನ್ನು ರಸ್ತೆಯ ಬದಿಗೆ ತಳ್ಳಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಒಂದು ಗಂಟೆಗಳ ಕಾಲ ಸಾಕಷ್ಟು ಬಸ್‌ಗಳು ಹಾಗೂ ವಾಹನಗಳು ರಸ್ತೆಯಲ್ಲೇ ನಿಲುಗಡೆಗೊಂಡಿದ್ದವು. ಸಂಬAಧಿಸಿದ ಇಲಾಖೆಗಳ ನಿರ್ಲಕ್ಷö್ಯತನಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.