ಪೊನ್ನಂಪೇಟೆ, ಮೇ ೯: ಜಂಇಯ್ಯತುಲ್ ಮುಅಲ್ಲಿಮೀನ್ ಸಿದ್ದಾಪುರ ರೇಂಜಿನ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರಿಫ್ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಹಸನಿ ಹಾಗೂ ಕೋಶಾಧಿಕಾರಿಯಾಗಿ ರಹೂಫ್ ಹಾಜಿ ನೇಮಕಗೊಂಡಿದ್ದಾರೆ.

ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ಜಂಇಯ್ಯತುಲ್ ಮುಅಲ್ಲಿಮೀನ್‌ನ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡÀಲಾಯಿತು. ಉಪಾಧ್ಯಕ್ಷರಾಗಿ ನೌಫಲ್ ಹುದವಿ, ಹಸನ್ ಬಾಖವಿ, ಜಂಟಿ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ವಾಫಿ, ಮಜೀದ್ ಬಾಖವಿ ಆಯ್ಕೆಯಾದರು. ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿ ಹನೀಫ ಮೌಲವಿ, ಉಪಾಧ್ಯಕ್ಷರಾಗಿ ಕರೀಂ ಮೌಲವಿ ಆಯ್ಕೆಗೊಂಡರೆ, ಎಸ್.ಬಿ.ವಿ. ಅಧ್ಯಕ್ಷರಾಗಿ ರಹೂಫ್ ಹುದವಿ ಹಾಗೂ ಎಸ್.ಬಿ.ವಿ. ಸಂಚಾಲಕರಾಗಿ ಅಜೀಜ್ ಬಾಖವಿ ಆಯ್ಕೆಗೊಂಡಿದ್ದಾರೆ.