(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮೇ ೯ : ಕೊಡವ ಜನಾಂಗದವರಿಗೂ ಹಾಕಿ ಆಟಕ್ಕೂ ಅವಿನಾಭಾವ ಸಂಬAಧವಿದೆ. ಕೊಡವ ಜನಾಂಗಕ್ಕೆ ಸೇರಿರುವ ಹಲವಾರು ಮಂದಿ ಹಾಕಿ ಕ್ರೀಡೆಯಲ್ಲಿ ಒಲಂಪಿಯನ್‌ಗಳಾಗಿ, ಅಂತರ ರಾಷ್ಟಿçÃಯ ಆಟಗಾರರಾಗಿ ದೇಶವನ್ನು ಪ್ರತಿನಿಧಿಸಿದ್ದಾರೆ. ರಾಷ್ಟಿçÃಯ ತಂಡ ರಾಜ್ಯ ತಂಡ ಸೇರಿದಂತೆ ಪ್ರತಿಷ್ಠಿತ ಕಂಪೆನಿ, ಸಂಸ್ಥೆಗಳಲ್ಲಿಯೂ ಕೊಡವ ಹಾಕಿ ಆಟಗಾರರು ತಮ್ಮ ಪ್ರತಿಭೆಯ ಮೂಲಕ ಉನ್ನತ ಹುದ್ದೆಗಳಲ್ಲಿಯೂ ಇದ್ದು ಈಗಲೂ ಆಟಗಾರರಾಗಿದ್ದಾರೆ. ಕೊಡವ ಕೌಟುಂಬಿಕ ಹಾಕಿ ಉತ್ಸವ ಸೇರಿದಂತೆ ವಿವಿಧ ಊರು-ನಾಡುಗಳಲ್ಲಿ ವಿವಿಧ ರೀತಿಯ ಹಾಕಿ ಪಂದ್ಯಾಟಗಳೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ.

ಇದೀಗ ಈ ಪಂದ್ಯಾವಳಿಗಳ ಸಾಲಿಗೆ ಮತ್ತೊಂದು ಹೊಸ ಪ್ರಯತ್ನವೂ ನಡೆದಿದ್ದು ಕುತೂಹಲ ಸೃಷ್ಟಿಸುತ್ತಿದೆ.

ಮೈಸೂರು ಕೊಡವ ಸಮಾಜ ಯೂತ್ ವಿಂಗ್ ಮೈಸೂರು ಕೊಡವ ಸಮಾಜದ ಸಹಕಾರದೊಂದಿಗೆ ಮೈಸೂರಿನ ಚಾಮುಂಡಿ ವಿಹಾರ್ ಟರ್ಫ್ ಮೈದಾನದಲ್ಲಿ ಈ ಪಂದ್ಯಾವಳಿ ಆಯೋಜಿಸುತ್ತಿದ್ದು ಕೊಡವ ಜನಾಂಗದಲ್ಲಿ ಈ ಪ್ರಯತ್ನ ಪ್ರಥಮ ಭಾರಿಯದ್ದಾಗಿದೆ.

ಕಳೆದ ವರ್ಷ ಯೂತ್ ವಿಂಗ್‌ನ ಉದ್ಘಾಟನಾ ಸಮಾರಂಭದ ಅಂಗವಾಗಿ ಸಣ್ಣ ರೀತಿಯ ಪಂದ್ಯಾಟ ನಡೆಸಲಾಗಿದ್ದು ಇದು ಯಶಸ್ಸು ಕಂಡಿತ್ತು. ಇದರಿಂದ ಉತ್ತೇಜಿತರಾಗಿರುವ ಯುವಕರ ತಂಡ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

೧೨ ಫ್ರಾಂಚೈಸಿಗಳು : ಕೊಡವ ಹಾಕಿ ಪ್ರೀಮಿಯರ್ ಲೀಗ್ (ಕೆ.ಪಿ.ಹೆಚ್.ಎಲ್)- ೨೦೨೫ ಎಂಬ ಪಂದ್ಯಾವಳಿಗೆ ಸಿದ್ಧತೆ ನಡೆದಿದೆ. ಈ ಪಂದ್ಯಾವಳಿ ೧೨ ಫ್ರಾಂಚೈಸಿಗಳ ನಡುವೆ ಜರುಗಲಿದೆ. ಈ ತನಕ ಐ.ಪಿ.ಎಲ್. ಕ್ರಿಕೆಟ್ ಮಾದರಿಯಲ್ಲಿ ಪ್ರಾಂಚೈಸಿಗಳ ನಡುವೆ ಹಾಕಿ ಪಂದ್ಯಾಟ ನಡೆದಿರಲಿಲ್ಲ. ಕೊಡವ ಜನಾಂಗಕ್ಕೆ ಸೇರಿದ ೧೪ ವರ್ಷ ವಯೋಮಿತಿಗೆ ಮೇಲ್ಪಟ್ಟ ವೃತ್ತಿಪರ ಆಟಗಾರರು ಸೇರಿದಂತೆ ಇನ್ನಿತರ ಎಲ್ಲಾ ಆಟಗಾರರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.

೧೨ ಫ್ರಾಂಚೈಸಿಗಳಲ್ಲಿ ತಲಾ ೧೬ ರಿಂದ ೧೮ ಆಟಗಾರರಿಗೆ ಅವಕಾಶವಿದೆ. ಒಟ್ಟು ೨೨೦ ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

೧೧ಎ ಸೈಡ್ ಪಂದ್ಯಾಟ ಇದಾಗಿದ್ದು ಜೂನ್ ತಿಂಗಳಿನಲ್ಲಿ ೩ ದಿನಗಳ ಕಾಲ ಮೈಸೂರಿನ ಚಾಮುಂಡಿ ವಿಹಾರ್ ಟಫ್ ಮೈದಾನದಲ್ಲಿ ಪಂದ್ಯಾಟ ಜರುಗಲಿದೆ. ಆಟಗಾರರ ನೋಂದಣಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈತನಕ ಒಟ್ಟು ೨೦೦ ಆಟಗಾರರು ಬಿಡ್ಡಿಂಗ್‌ಗಾಗಿ ಹೆಸರು ನೋಂದಾಯಿಸಿಕೊAಡಿದ್ದಾರೆ. ನೋಂದಣಿಗೆ ತಾ. ೧೫ ಕೊನೆಯ ದಿನವಾಗಿದೆ.

೭ ಮಹಿಳಾ ಆಟಗಾರ್ತಿಯರು

ವಿವಿಧ ತಂಡಗಳ ಪರ ಮಹಿಳಾ ಆಟಗಾರ್ತಿಯರೂ ಆಡಬಹುದಾಗಿದೆ. ಈತನಕ ೭ ಮಹಿಳಾ ಆಟಗಾರ್ತಿಯರು ಹೆಸರು ನೋಂದಾಯಿಸಿಕೊAಡಿದ್ದಾರೆ. ಇವರ ಖರೀದಿ ವಿಚಾರ ಫ್ರಾಂಚೈಸಿಗಳ ತೀರ್ಮಾನವಾಗಲಿದೆ. ಇನ್ನು ೨೦ ಆಟಗಾರರಿಗೆ ಅವಕಾಶವಿರುವುದಾಗಿ ಯೂತ್ ವಿಂಗ್‌ನ ಪ್ರಮುಖರು ತಿಳಿಸಿದ್ದಾರೆ.

ನೋಂದಾವಣೆ ಮಾಡಿಕೊಂಡ ೨೨೦ ಆಟಗಾರರಲ್ಲಿ ತಮಗೆ ಬೇಕಾದವರನ್ನು ೧೨ ಫ್ರಾಂಚೈಸಿಯವರು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

೮ ಫ್ರಾಂಚೈಸಿಗಳು ಮುಂದು

ಮೇ ಅಂತ್ಯದಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ವಿವಿಧ ಪ್ರಮುಖರು - ಆಸಕ್ತರ ಮಾಲೀಕತ್ವದಲ್ಲಿ ೮ ಫ್ರಾಂಚೈಸಿಗಳು ಮುಂದೆÀ ಬಂದಿವೆ. ಇತರ ಕೆಲವು ತಂಡಗಳು ಚರ್ಚೆಯಲ್ಲಿವೆ.

ರೂ. ೧.೫೦ ಲಕ್ಷ ಬಹುಮಾನ

ಈ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. ೧.೫೦ ಲಕ್ಷ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೧ ಲಕ್ಷ ನಗದು ಟ್ರೋಫಿ ಹಾಗೂ ೩ನೇ ಸ್ಥಾನಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಿದೆ.

ಲೋಗೋ ಅನಾವರಣ

ಕೊಡವ ಹಾಕಿ ಪ್ರೀಮಿಯರ್ ಲೀಗ್‌ನ ಲೋಗೋ ಅನಾವರಣ ಕಾರ್ಯಕ್ರಮ ಏ. ೨೭ರಂದು ಮಡಿಕೇರಿಯಲ್ಲಿ ಜರುಗಿದ ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಸಂದರ್ಭ ಜರುಗಿತು. ವಿವಿಧ ಅತಿಥಿಗಳೊಂದಿಗೆ ಯೂತ್ ವಿಂಗ್‌ನ ಪದಾಧಿಕಾರಿಗಳು ಈ ಸಂದರ್ಭ ಪಾಲ್ಗೊಂಡಿದ್ದರು.

ಪAದ್ಯಾವಳಿಯ ಹೆಚ್ಚಿನ ವಿವರಕ್ಕೆ ಕೋಟೆರ ವಿಧಿತ್ ಉತ್ತಯ್ಯ (೮೮೮೦೪೦೧೨೦೬) ಹಂಚೆಟ್ಟಿರ ವರುಣ್ ನಂಜಪ್ಪ (೮೯೫೧೯೪೯೩೫೧) ಹಾಗೂ ಕಡೇಮಾಡ ಶ್ರೇಯಸ್ ಮುತ್ತಣ್ಣ (೯೯೦೦೭೧೩೫೭೬) ಅವರನ್ನು ಸಂಪರ್ಕಿಸಬಹುದು.