ಮಡಿಕೇರಿ, ಮೇ ೮: ಮರಗೋಡುವಿನ ಈವ್ನಿಂಗ್ ಸ್ಟಾರ್ ಕ್ಲಬ್ ವತಿಯಿಂದ ಆಯೋಜಿತವಾಗಿರುವ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಾಟ ತಾ. ೯ ರಂದು (ಇಂದು) ನಡೆಯಲಿದೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕಡ್ಲೇರ ತಂಡ ೧೦ ಓವರ್ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕಟ್ಟೆಮನೆ ತಂಡ ೫ ವಿಕೆಟ್ ಕಳೆದುಕೊಂಡು ೬೧ ರನ್ ಗಳಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಇನ್ನೊಂದು ಪಂದ್ಯಾಟದಲ್ಲಿ ಪರ್ಲಕೋಟಿ ತಂಡ ೩ ವಿಕೆಟ್ಗೆ ೧೧೭ ರನ್ ಕಲೆ ಹಾಕಿದರೆ, ಬೆಳಿಯಂಡ್ರ ತಂಡ ೫ ವಿಕೆಟ್ಗೆ ೬೩ ರನ್ ಗಳಿಸಿ ೫೪ ರನ್ಗಳ ಅಂತರದಿAದ ಸೋಲನುಭವಿಸಿತು.
ಮತ್ತೊಂದು ಪಂದ್ಯಾಟದಲ್ಲಿ ಕೆದಂಬಾಡಿ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ೭೬ ರನ್ ಗಳಿಸಿದರೆ, ತಳೂರು ತಂಡ ೪.೪ ಓವರ್ನಲ್ಲಿ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತಳೂರು ತಂಡದ ಪರ ವಿಕ್ಕಿ ೧೫ ಎಸೆತಗಳಲ್ಲಿ ೯ ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ ೬೨ ರನ್ ಗಳಿಸಿ ಔಟಾಗದೆ ಉಳಿದು ಗಮನ ಸೆಳೆದರು.
ಕೊನೆಯ ಪಂದ್ಯಾಟದಲ್ಲಿ ಉಳುವಾರನ ತಂಡ ೩ ವಿಕೆಟ್ಗೆ ೧೨೧ ರನ್ ಸಂಪಾದಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕುದುಪಜೆ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ೮೨ ರನ್ ಮಾತ್ರ ಗಳಿಸಿ ೩೯ ರನ್ಗಳ ಅಂತರದಿAದ ಸೋಲನುಭವಿಸಿತು. ಉಳುವಾರನ ಚೇತನ್ ೩೨ ಎಸೆತಗಳಲ್ಲಿ ೬ ಸಿಕ್ಸರ್, ೩ ಬೌಂಡರಿ ಸಹಿತ ೬೨ ರನ್ ಗಳಿಸಿ ಔಟಾಗದೆ ಉಳಿದು ಗಮನ ಸೆಳೆದರು.