ಮಡಿಕೇರಿ, ಮೇ ೮: ವೀರಾಜಪೇಟೆ ಹೊರವಲಯದ ಪೆಗ್ಗರಿಕಾಡು ಪೈಸಾರಿಯಲ್ಲಿ ನಾಪತ್ತೆಯಾಗಿದ್ದ ಗೂಳಿಯನ್ನು ಮನೆಗೆ ಕರೆತರುವ ವೇಳೆ ಮಾಲೀಕನನ್ನೇ ತಿವಿದು ಕೊಂದುಹಾಕಿದೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿ¸ Àಲಾಯಿತು. ಸಾಂತ್ವನ : ಮೃತರ ಮನೆಗೆ ಭೇಟಿ ನೀಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಘಟನೆ ಬಗ್ಗೆ ಶಾಸಕರ ಗಮನಕ್ಕೆ ತಂದಿರುವುದಾಗಿ ಹೇಳಿದರು.