ಮಡಿಕೇರಿ, ಮೇ ೭: ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಗೆಂದು ಅಧಿಕಾರಿಗಳು ಮನೆ ಮನೆಗೆ ಬರುವ ಸಂದರ್ಭ ಆದಿ ದ್ರಾವಿಡ ಜನಾಂಗದ ಮಂದಿ ಪರಿಶಿಷ್ಟ ಜಾತಿ ``ಆದಿ ದ್ರಾವಿಡ'' ಎಂದು ನಮೂದಿ ಸಬೇಕು. ಅಧಿಕಾರಿಗಳು ಕೂಡ ಇದನ್ನು ಅನುಮೋದಿಸಿ ಪರಿಶಿಷ್ಟ ಜಾತಿ ``ಆದಿ ದ್ರಾವಿಡ'' ಎಂದು ದಾಖಲಿಸಬೇಕು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ. ಸೋಮಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಜಾತಿ ಬಾಂಧವರಿಗೆ ೮ ವಿವಿಧ ರೀತಿಯ `ಪರಿಶಿಷ್ಟ ಜಾತಿ' ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿ ``ಆದಿ ದ್ರಾವಿಡ'' ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರÀ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬAಧಪಟ್ಟAತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸುತ್ತಿದೆ. ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಇಲ್ಲಿಯವರೆಗೆ ಪರಿಶಿಷ್ಟ ಜಾತಿ ``ಆದಿ ದ್ರಾವಿಡ'' ಎಂದು ಜಾತಿ ಪ್ರಮಾಣ ಪತ್ರ ದೊರೆತ್ತಿಲ್ಲ. ಶೇ.೫ ಮಂದಿಗೆ ಮಾತ್ರ ಪ್ರಮಾಣಪತ್ರ ದೊರೆತ್ತಿದ್ದು, ಶೇ. ೯೫ ಮಂದಿ ಗೊಂದ ಲದಲ್ಲಿದ್ದಾರೆ ಎಂದು ಹೆಚ್.ಎಂ. ಸೋಮಪ್ಪ ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪಿ.ಎಲ್. ಸುರೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಧು, ಮಡಿಕೇರಿ ತಾಲೂಕು ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಮಕ್ಕಂದೂರು, ವೀರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಎ. ಲಲಿತ ಹಾಗೂ ಮಾದಾಪುರ ಘಟಕದ ಸದಸ್ಯ ರವಿ ಮಕ್ಕಂದೂರು ಉಪಸ್ಥಿತರಿದ್ದರು.