ಕುಶಾಲನಗರ, ಮೇ ೭: ವಿಶ್ವ ಸಾಕುಪ್ರಾಣಿಗಳ ಅಂಗವಾಗಿ ಕುಶಾಲನಗರ ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾಮಟ್ಟದ ಸಾಕ ನಾಯಿ ಮತ್ತು ಬೆಕ್ಕುಗಳ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು.

ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ತಳಿಗಳ ಸುಮಾರು ೪೦ಕ್ಕೂ ಅಧಿಕ ಸಾಕು ಪ್ರಾಣಿಗಳು ಪಾಲ್ಗೊಂಡಿದ್ದವು.

ದೇಶಿಯ ವಿದೇಶಿ ನಾಯಿ ತಳಿಗಳಾದ ಸೈಂಟ್ ಬರ್ನಾರ್ಡ್, ಶಿಟ್ಸು, ಗೋಲ್ಡನ್ ರಿಟ್ರಿವರ್, ಗ್ರೇಟ್ ಡೆನ್, ಪಾಮೋರಿನ್, ಹಸ್ಕೆ, ಲಾಬ್ರಡರ್, ಅಮೆರಿಕನ್ ಬುಲ್ಲಿ, ಜರ್ಮನ್ ಶೆಫರ್ಡ್, ರಾಟ್ ವೀಲರ್ ಹಾಗೂ ವಿವಿಧ ತಳಿಗಳ ಬೆಕ್ಕುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್, ಉಪಾಧ್ಯಕ್ಷರಾದ ರೇಷ್ಮಾ, ಕಾರ್ಯದರ್ಶಿ ಸೀತಾ ಲಕ್ಷಿö್ಮ, ಖಜಾಂಚಿ ಜಾಸ್ಮಿನ್, ಹಿಂದಿನ ಸಾಲಿನ ಅಧ್ಯಕ್ಷೆ ನೇಹಾ ಜಗದೀಶ್ ಮತ್ತು ನಿರ್ದೇಶಕರು ಇದ್ದರು. ವಿಜೇತ ನಾಯಿಗಳು ಹಾಗೂ ಬೆಕ್ಕುಗಳ ಮಾಲೀಕರಿಗೆ ಟ್ರೋಫಿ ವಿತರಿಸಲಾಯಿತು.

ವಿವಿಧ ಸಂಸ್ಥೆಗಳ ಮೂಲಕ ನಾಯಿಗಳಿಗೆ ಉಚಿತ ಆಹಾರ ಮತ್ತು ಅಗತ್ಯ ಔಷಧಿ ನೀಡಲಾಯಿತು.