ವೀರಾಜಪೇಟೆ, ಮೇ ೭: ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ. ಬಾಡಗ ಗ್ರಾಮದ ಪ್ರದೇಶದಲ್ಲಿ ಕಾಡು ಕೋಣಗಳ ಧಾಳಿಯಿಂದಾಗಿ ಕಾಫಿ ತೋಟಗಳು ಹಾನಿಗೆ ಒಳಗಾಗಿವೆ. ವಿ. ಬಾಡಗ ಗ್ರಾಮ ವ್ಯಾಪ್ತಿಯ ಕೊಕ್ಕ ಪುದುಕೇರಿ ಗ್ರಾಮದ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡು ಕೋಣಗಳು ತೋಟಗಳಲ್ಲಿ ಬೆಳೆದಿರುವ ಕಾಫಿ ಗಿಡ, ತೆಂಗು ಮತ್ತು ಬಾಳೆ ಗಿಡಗಳನ್ನು ಧ್ವಂಸ ಮಾಡಿದ್ದು ನಷ್ಟ ಉಂಟಾಗಿದೆ.