ನಾಪೋಕ್ಲು, ಮೇ ೭: ಕಾರ್ಮಿಕರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯಕAಡ ಘಟನೆ ಕೋಕೇರಿ ಗ್ರಾಮದಲ್ಲಿ ನಡೆದಿದೆ.
ಕೋಕೇರಿಯಲ್ಲಿ ನೆಲೆಸಿದ್ದ ಪಣಿ ಯರವರ ಮಂಜು ಎಂಬವರನ್ನು ಕೊಲೆಗೈದ ಆರೋಪದಡಿ ಪಣಿ ಯರವರ ರಮೇಶ್ (೪೯) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಕೇರಿ ಗ್ರಾಮದ ನಿವಾಸಿ ಪಿ.ಎಸ್ ಮಾದಪ್ಪ ಅವರ ಲೈನ್ ಮನೆಯಲ್ಲಿ ಕೊಲೆಯಾದ ಮಂಜು ಹಾಗೂ ಆರೋಪಿ ರಮೇಶ್ ವಾಸವಿದ್ದು, ಮಂಗಳವಾರ ರಾತ್ರಿ ಇಬ್ಬರ ನಡುವೆ ಕ್ಷÄಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟಿದೆ. ಕುಡಿದ ಮತ್ತಿನಲ್ಲಿ ಇಬ್ಬರು ಬಡಿದಾಡಿಕೊಂಡಿದ್ದು, ಈ ವೇಳೆ ರಮೇಶ್ ಕತ್ತಿಯಿಂದ ಮಂಜು ಮೇಲೆ ಹಲೆಗೈದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮಂಜುನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಒಪ್ಪಿಸಲಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ, ನಾಪೋಕ್ಲು ಠಾಣೆಯ ಸಹಾಯಕ ಠಾಣಾಧಿಕಾರಿ ಪ್ರಕಾಶ್, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಹಾಗೂ ನಾಪೋಕ್ಲು ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.