ಕಡಂಗ, ಮೇ. ೭: ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಹಸು ಸೇರಿದಂತೆ ಜಿಂಕೆ ಮೃತಪಟ್ಟ ಘಟನೆ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲಗೇರಿಯಲ್ಲಿ ನಡೆದಿದೆ.

ಕುಂಜಲಗೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದು, ಸೋಮವಾರ ಬೆಳಿಗ್ಗೆ ಹಸುವಿನ ಮಾಲೀಕರು ಮೇಯಿಸಲು ಗದ್ದೆಯಲ್ಲಿ ಬಿಟ್ಟ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ೧೦:೩೦ ಗಂಟೆಗೆ ಕೆಳಗೆ ಬಿದ್ದ ವಿದ್ಯುತ್ ತಂತಿಗಳನ್ನು ಸ್ಪರ್ಶಸಿ ನಾಲ್ಕು ಹಸು ಹಾಗೂ ಒಂದು ವನ್ಯಜೀವಿಯಾದ ಜಿಂಕೆಯು ಸಹ ಮೃತಪಟ್ಟಿದೆ. ಚೀಯಂಡಿರ ಸುರೇಶ್ ರವರ ೩ ಹಾಗೂ ಚೀಯಂಡಿರ ಸುಬ್ರಮಣಿ ಮಾಲೀಕತ್ವದ ಒಂದು ಹಸು ಮೃತಪಟ್ಟಿದೆ. ಮೃತಪಟ್ಟ ಜಿಂಕೆ ಕಳೇಬರಹವನ್ನು ಅರಣ್ಯ ಇಲಾಖೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಕೆ ಇ ಬಿ ಸಿಬ್ಬಂದಿಗಳು, ಪೊಲೀಸ್ ಇಲಾಖಾ ಸಿಬ್ಬಂದಿಗಳು, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. -ನೌಫಲ್