ಮಡಿಕೇರಿ, ಮೇ ೭: ನೇತಾಜಿ ಯುವಕ ಮಂಡಲ ತಾಳತ್ತ್ಮನೆ ಹಾಗೂ ಹೊಟೇಲ್ ಆಕ್ಸಿರಿಚ್, ತಾಳತ್ತ್ತ್ಮನೆ, ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ತಾ. ೧೦ ರಂದು ಮಧ್ಯಾಹ್ನ ೨:೩೦ ಗಂಟೆಗೆ ಹೊಟೇಲ್ ಆಕ್ಸಿರಿಚ್‌ನಲ್ಲಿ ಭಾರತೀಯ ಸೇನೆಗೆ ನೇಮಕಾತಿ ಬಯಸುವ ಆಕಾಂಕ್ಷಿತ ೧೫ ರಿಂದ ೨೫ ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಸೇನಾ ನೇಮಕಾತಿಯ ಬಗ್ಗೆ ಉಚಿತ ವಿಶೇಷ ಅರಿವು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಸೇನೆಯಲ್ಲಿ ಸೇನಾಧಿಕಾರಿ ಮತ್ತು ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆಯಾಗಲು ಬೇಕಾದ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ಆಕಾಂಕ್ಷಿತ ಅರ್ಹ ಅಭ್ಯರ್ಥಿಗಳು ಪ್ರೌಢ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಎನ್.ಸಿ.ಸಿ. ಕೆಡೆಟ್‌ಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ನಹಿಸುತ್ತಿರುವ ಜಯಂತ್ ಸುಬ್ಬಯ್ಯ ಅವರು ಆಡಿಯೋ ವಿಶುವಲ್ ಪ್ರಾತ್ಯಕ್ಷಿತೆ ಮುಖಾಂತರ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೯೦೧೬೭೭೬೭೫, ೯೬೩೨೦೦೭೯೧೫ ಸಂಪರ್ಕಿಸಬಹುದಾಗಿದೆ.