ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಜೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಹಲವು ಯೋಧರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲೂ ಆಯಾ ಬೆಟಾಲಿಯನ್‌ಗಳಿಂದ ಸೂಚನೆ ಬಂದಿದ್ದು, ಈಗಾಗಲೇ ಹಲವು ಯೋಧರು ಮರಳಿದ್ದಾರೆ.
ಜಿಲ್ಲೆಯ ಹಲವಷ್ಟು ಮಂದಿ ಭೂ ಸೇನೆ, ವಾಯುಸೇವೆ ಹಾಗೂ ನೌಕಾದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ರಜೆಯಲ್ಲಿದ್ದ ಹಲವರು ರಜೆಯನ್ನು ಮೊಟಕುಗೊಳಿಸಿ ದೇಶಸೇವೆಯ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಇದು ಮಾತ್ರವಲ್ಲ ರಕ್ಷಣಾ ಪಡೆಯಲ್ಲಿ ಕೆಲಸ ನಿರ್ವಹಿಸಿ ಒಂದು ವರ್ಷದಿಂದ ಈಚೆಗೆ ನಿವೃತ್ತರಾಗಿರುವವರಿಗೂ ಅಗತ್ಯಬಿದ್ದರೆ ಮತ್ತೆ ಕೆಲಸಕ್ಕೆ ಮರಳಲು ಸಿದ್ಧರಾಗಿರುವಂತೆ ಸೇನಾ ಉನ್ನತ ವಲಯದಿಂದ ಸೂಚನೆಗಳೂ ಬಂದಿರುವ ಮಾಹಿತಿಯಿದೆ. ಇದರಂತೆ ಇತ್ತೀಚೆಗೆ ನಿವೃತ್ತರಾಗಿರುವ ಹಲವರು ಇದಕ್ಕೆ ಸಿದ್ಧರಾಗಿರುವುದಾಗಿ ತಿಳಿದು ಬಂದಿದೆ.