ಮಡಿಕೇರಿ, ಮೇ ೭: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಂಬAಧಿಸಿದAತೆ ಭಾರತೀಯ ಸೇವೆ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಜಿಲ್ಲೆಯ ಹಿರಿಯ ನಿವೃತ್ತ ಅಧಿಕಾರಿಗಳು ನೀಡಿರುವ ಪ್ರತಿಕ್ರಿಯೆ ಇಂತಿದೆ.
ಪಾಕ್ ಸುಮ್ಮನಿರುವುದು ವಾಸಿ : ಲೆ.ಜ. ಬನ್ಸಿ ಪೊನ್ನಪ್ಪ
ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ಕೈಗೊಂಡಿರುವುದು ಸಮತೋಲನವಾದ ಮತ್ತು ನಿಖರ ಹಾಗೂ ನಿರ್ದಿಷ್ಟವಾದ ಗುರಿಯ ದಾಳಿಯಾಗಿದೆ. ಈ ದಾಳಿ ಭಾರತಕ್ಕೆ ಬೇಕಾದ ಫಲಿತಾಂಶವನ್ನು ನೀಡಿದೆ ಎಂದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹಾಗೂ ಅಡ್ಜುಟೆಂಟ್ ಜನರಲ್ ಹುದ್ದೆಯಲ್ಲಿದ್ದು, ನಿವೃತ್ತರಾಗಿರುವ ಸೇನಾಧಿಕಾರಿ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ಇದೀಗ ಪಾಕಿಸ್ತಾನದ ಮೂಲಕ ಸಂಭವನೀಯ ಪ್ರತೀಕಾರಕ್ಕೆ ತಯಾರಿರಬೇಕಿದೆ. ಆದರೆ ಅಂತಹ ಸಂದರ್ಭ ಎದುರಾದಲ್ಲಿ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಲೂ ಕೂಡ ಸಜ್ಜಾಗಿದೆ. ಪಾಕಿಸ್ತಾನ ಈ ವಿಚಾರದಲ್ಲಿ ಸುಮ್ಮನಿರುವುದು ಉತ್ತಮ ಎಂದು ಅವರು ತಮ್ಮ ಅನುಭವ ಹಂಚಿಕೊAಡರು.ಕಟ್ಟುನಿಟ್ಟು - ವ್ಯವಸ್ಥಿತ ದಾಳಿ : ಏರ್ ಮಾರ್ಷಲ್ ಚಂಗಪ್ಪ
ಮಡಿಕೇರಿ, ಮೇ ೭: ಭಾರತ ಎಂದೂ ಯುದ್ಧ ಬಯಸುವುದಿಲ್ಲ. ಆದರೆ ಪಹಲ್ಗಾಮ್‌ನಲ್ಲಿ ಉಗ್ರರು ಮಾಡಿದ ಹೀನ ಕೃತ್ಯಕ್ಕೆ ಪ್ರತೀಕಾರ ಅತ್ಯವಶ್ಯವಾಗಿತ್ತು. ಭಾರತೀಯ ಸೇನೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ದಾಳಿ ನಡೆಸಿದ್ದು, ಯಶಸ್ಸು ಕಂಡಿದೆ.
ಎಲ್ಲವನ್ನೂ ಅವಲೋಕಿಸಿ ಕೇವಲ ಉಗ್ರರು- ಉಗ್ರ ನೆಲೆಗಳನ್ನೇ ಗುರಿಮಾಡಲಾಗಿದೆ. ಸನಿಹದಲ್ಲೇ ಪಾಕಿಸ್ತಾನದ ಸೇನಾ ಕ್ಯಾಂಪ್, ನಾಗರಿಕರು ಇದ್ದರೂ ಅವರಿಗೆ ಯಾವುದೇ ರೀತಿಯ ತೊಂದರೆ ಮಾಡದಿರುವುದು ಸೇನೆಯ ವ್ಯವಸ್ಥಿತ ಕಾರ್ಯಾಚರಣೆ ಎಂದು ನಿವೃತ್ತ ಏರ್ ಮಾರ್ಷಲ್ ಬಲ್ಟಿಕಾಳಂಡ ಚಂಗಪ್ಪ ಅವರು ಹೇಳಿದ್ದಾರೆ.
ಈ ಮೂಲಕ ಭಾರತ ಏನು ಮಾಡಬೇಕಿದೆ ಅದನ್ನು ಮಾಡಿದೆ. ಉಗ್ರರು ಹಾಗೂ ಅವರಿಗೆ ಸಹಕರಿಸುವವರನ್ನು ‘ಟಾರ್ಗೆಟ್’ ಮಾಡಲಾಗಿದೆ. ಇದಲ್ಲದೆ ಮುಂದಿನ ನಡೆಯನ್ನು ಸಮರ್ಥವಾಗಿ ಎದುರಿಸಲು ಭಾರತ ಸರ್ವ ಸನ್ನದ್ದವಾಗಿದೆ ಎಂದು ಅವರು ಹೇಳಿದರು.
ಮತ್ತೊಂದು ಗಂಭೀರ ವಿಚಾರವೆಂದರೆ, ಆಂತರಿಕವಾಗಿ ಒಂದಷ್ಟು ಹೆಚ್ಚಿನ ಜಾಗ್ರತೆ ವಹಿಸಬೇಕಿದ್ದು, ಇದರಲ್ಲಿ ದೇಶದ ನಾಗರಿಕರ ಪಾತ್ರ ಹೆಚ್ಚಿದೆ. ಕೊಡಗು ಜಿಲ್ಲೆಗೆ ಸಂಬAಧಿಸಿದAತೆಯೂ ನಾಗರಿಕರು ಕಾಳಜಿ ವಹಿಸಬೇಕಿದ್ದು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಅರಿವಿಗೆ ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ನಾಗರಿಕರ ಕರ್ತವ್ಯವಾಗಿದೆ ಎಂದು ಅವರು ಸಲಹೆಯಿತ್ತರು. ಆರಂಭವಷ್ಟೇ... ಇನ್ನೂ ಬಾಕಿ ಇದೆ: ಮೇ.ಜ. ನಂಜಪ್ಪ
ಉಗ್ರರ ವಿರುದ್ಧದ ಕಾರ್ಯಾಚರಣೆ ಸದ್ಯಕ್ಕೆ ಆರಂಭವಷ್ಟೇ... ಇನ್ನೂ ನಿಗ್ರಹಿಸುವುದು ಬಾಕಿ ಇದೆ ಎಂಬದಾಗಿ ಈಗಿನ ದಾಳಿಯನ್ನು ಸ್ವಾಗತಿಸಿರುವ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ಅವರು ಹೇಳಿದ್ದಾರೆ.
೧೯೭೧ರ ಇಂಡೋ-ಪಾಕ್ ಸಮರದಲ್ಲಿ ತಮ್ಮ ಸಾಧನೆಗಾಗಿ ವೀರಚಕ್ರ ಬಿರುದು ಪಡೆದಿರುವ ನಂಜಪ್ಪ ಅವರು ಪಾಕಿಸ್ತಾನಕ್ಕೆ ಭಾರತದ ಎದುರು ಯುದ್ಧ ಮಾಡುವ ಸಾಮರ್ಥ್ಯ ಇಲ್ಲ. ಇದರಿಂದಾಗಿ ಅಲ್ಲಲ್ಲಿ ಆಗಾಗ್ಗೆ ಭಯೋತ್ಪಾದಕ ದಾಳಿ ನಡೆಸುತ್ತಾ ಬರುತ್ತಿದೆ.
ಟೆರರಿಸಂ ಅನ್ನು ಲೋ ಇಂಟೆನ್ಸಿಟಿ ವಾರ್ ಎನ್ನಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಇಂತಹ ಕೃತ್ಯ ನಡೆಸುವುದು ಇವರ ಛಾಳಿ. ಈ ಕಾರಣದಿಂದಲೇ ಉಗ್ರರಿಗೆ ಅಲ್ಲಿನ ಸೇನೆಯೂ ಬೆಂಬಲ ನೀಡುತ್ತಿದೆ. ಇದೀಗ ಪ್ರಧಾನಿ ಮೋದಿ ಅವರು ಸೇನೆಯೊಂದಿಗೆ ಎಲ್ಲವನ್ನೂ ಸಮಗ್ರವಾಗಿ ಅಳೆದು - ತೂಗಿ ಪಾಕ್ ವಿರುದ್ಧ ಆರಂಭಿಕವಾಗಿ ಎಲ್ಲಾ ರೀತಿಯ ನಿಯಂತ್ರಣವನ್ನು ಜಾರಿ ಮಾಡಿ ಇದೀಗ ಉಗ್ರರ ಸಂಹಾರಕ್ಕೆ ಮುಂದಾಗಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವೇ ಉಗ್ರ ಚಟುವಟಿಕೆಯ ನೆಲೆಯಾಗಿದೆ. ಶೇ.೮೦ ರಷ್ಟು ಉಗ್ರರು ಇಲ್ಲೇ ಇದ್ದಾರೆ. ಈ ಮೂಲಕ ಸುಮಾರು ೧೦೦ ಕಿ.ಮೀ. ಒಳನುಗ್ಗಿ ಕೇವಲ ಉಗ್ರರು, ಉಗ್ರರ ನೆಲೆಯನ್ನು ನಾಶಪಡಿಸಿರುವ ಸಾಹಸದ ಕಾರ್ಯಾಚರಣೆ ಇದಾಗಿದೆ. ಇದು ಒಂದು ರೀತಿಯಲ್ಲಿ ಆರಂಭವಾಗಿದ್ದು, ಎಲ್ಲಾ ಉಗ್ರರನ್ನು ಸದೆಬಡಿಯುವ ಕಾರ್ಯ ಮುಂದೆ ನಡೆಯಬೇಕಿದೆ ಎಂದು ವೀರಚಕ್ರ ಬಿರುದು ಪಡೆದಿರುವ ೧೯೭೧ರ ಯುದ್ಧದ ಅನುಭವವನ್ನು ಮೆಲುಕುಹಾಕಿದ ಕೆ.ಪಿ. ನಂಜಪ್ಪ ಅವರು ಹೇಳಿದರು.ಅರ್ಜಿ ಆಹ್ವಾನ
ಮಡಿಕೇರಿ, ಮೇ ೭: ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರು ೯೬೧೧೩೦೭೬೪೬. ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಗರಗಂದೂರು, ಪ್ರಾಂಶುಪಾಲರು ೮೧೦೫೬೫೭೪೫೧, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಸವನಹಳ್ಳಿ, ಪ್ರಾಂಶುಪಾಲರು ೯೮೪೫೬೫೯೯೦೯ ಈ ಕಾಲೇಜುಗಳಲ್ಲಿ ೨೦೨೫-೨೬ನೇ ಸಾಲಿಗೆ ಪ್ರಥಮ ಪಿ.ಯು.ಸಿ.ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. ೧೫ ಕೊನೆಯ ದಿನವಾಗಿದೆ. ಕೊಡಗು ಜಿಲ್ಲೆಯ ಈ ಮೂರು ವಸತಿ ಕಾಲೇಜುಗಳಲ್ಲಿ ಒಂದು ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದರೆ ೩ ಕಾಲೇಜಿಗೂ ಅನ್ವಯವಾಗುತ್ತದೆ, ಪ್ರತ್ಯೇಕವಾಗಿ ಪ್ರತೀ ಕಾಲೇಜಿಗೂ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.