ಪೊನ್ನಂಪೇಟೆ, ಮೇ ೭: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ಕಾವೇರಿ ಕಾಲೇಜು ಅಲುಮಿನಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪುಚ್ಚಿಮಾಡ ದಿ. ತಿಮ್ಮಯ್ಯ, ಪುಚ್ಚಿಮಾಡ ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ಪುಚ್ಚಿಮಾಡ ದಿ. ಮೀನಾ ಸುಬ್ಬಯ್ಯ ಅವರ ಜ್ಞಾಪಕಾರ್ಥವಾಗಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದು ಕೊಂಡಿತು.
ಕನ್ನಡ ಭಾಷಾ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕೆ.ಟಿ. ಸೋನಿಕ ಪ್ರಥಮ, ಕುಶಾಲನಗರ ಅನುಗ್ರಹ ಕಾಲೇಜಿನ ಬಿ.ಎಂ. ದರ್ಶನ್ ದ್ವಿತೀಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾ ಮಹದೇವ್ ತೃತೀಯ, ಆಂಗ್ಲ ಭಾಷ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕೆ.ಅರ್. ಮನ ಪ್ರಥಮ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಅನುಷ ಎಸ್ ದ್ವಿತೀಯ, ನಾಪೋಕ್ಲು ಮರ್ಕಜ್ ಕಾಲೇಜಿನ ಅಫೀದ ಕೆ.ಹೆಚ್. ತೃತೀಯ ಸ್ಥಾನ ಪಡೆದುಕೊಂಡರು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸುಗುಣ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎ. ಪೂವಣ್ಣ, ಭಾಷಣ ಸ್ಪರ್ಧೆಯ ಪ್ರಾಯೋಜಕರಾದ ಪಿ.ಟಿ. ಸುಭಾಷ್ ಸುಬ್ಬಯ್ಯ, ಪುಚ್ಚಿಮಾಡ ಅಶೋಕ್ ಅಚ್ಚಪ್ಪ, ಪುಚ್ಚಿಮಾಡ ಲಾಲ ಪೂಣಚ್ಚ, ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ಕಾವೇರಿ ಕಾಲೇಜು ಅಲುಮಿನಿ ಅಸೋಸಿಯೇಷನ್ ಕಾರ್ಯದರ್ಶಿ ಪಳಂಗAಡ ವಾಣಿ ಚಂಗಪ್ಪ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಪಿ. ಬೋಪಣ್ಣ, ಪ್ರೊ. ಎಂ.ಎಸ್. ಭಾರತಿ, ಅಲುಮಿನಿ ಅಸೋಸಿಯೇಷನ್ ಸದಸ್ಯರು, ಕಾರ್ಯಕ್ರಮ ಸಂಚಾಲಕಿ ಕಾವೇರಮ್ಮ, ಅಲುಮಿನಿ ಅಸೋಸಿಯೇಷನ್ ಸಂಚಾಲಕಿ ಎಸ್.ಎಂ. ರಜನಿ ಹಾಗೂ ಉಪನ್ಯಾಸಕರು ಇದ್ದರು. ಡಾ. ನರಸಿಂಹನ್, ಪ್ರೊ. ಎಂ.ಡಿ. ಅಕ್ಕಮ್ಮ, ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶಿವದಾಸ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.