ಮಡಿಕೇರಿ, ಮೇ ೬: ಖಾಸಗಿ ಹಿಡುವಳಿ ಜಾಗದಲ್ಲಿ ಜಾಗದ ಮಾಲೀಕರು ಈ ಜಾಗವನ್ನು ಭೂ ಪರಿವರ್ತನೆ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರುವುದಾಗಿ ಜೆಸಿಬಿ ಮತ್ತು ಹಿಟಾಚಿ ಯಂತ್ರದ ಸಹಾಯದಿಂದ ಮರಗಳನ್ನು ಬುಡಸಮೇತ ಬೀಳಿಸುತ್ತಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ. ಅನುಮತಿ ಪಡೆಯದೇ ಮರಗಳನ್ನು ಬೀಳಿಸಿರುವ ಬಗ್ಗೆ ಹಿಟಾಚಿಯಂತ್ರ ಮತ್ತು ಜೆಸಿಬಿ ಮಾಲೀಕರು ಮತ್ತು ವಾಹನ ಚಾಲಕರ ಮೇಲೆ ಈಗಾಗಲೇ ಅರಣ್ಯ ಮೊಕದ್ದಮೆ ದಾಖಲು ಮಾಡಿದ್ದು, ಭೂಪರಿವರ್ತನೆ ಮತ್ತು ಇತರೆ ಕಾಮಗಾರಿ ಮಾಡುವಾಗ ಮರಗಳನ್ನು ತೆರವುಗೊಳಿಸುವ ಸಂಬAಧ ಅರಣ್ಯ ಇಲಾಖೆಯಿಂದ ನೀಡಿದ ಅನುಮತಿ ಪತ್ರ ಇದ್ದಲ್ಲಿ ಅಥವಾ ಸಂಬAಧಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ವಿಚಾರಣೆ ಮಾಡಿ ಅನುಮತಿ ಪತ್ರ ಇದ್ದಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಬಹುದಾಗಿದೆ. ಅನುಮತಿ ಪತ್ರ ಇಲ್ಲದೇ ಕಾಮಗಾರಿ ಕೈಗೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.