ಕಣಿವೆ, ಮೇ ೬: ಕುಶಾಲನಗರ ತಾಲೂಕು ಶ್ರೀ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಕುಲಗುರು ಶ್ರೀ ಕೈವಾರ ತಾತಯ್ಯ ಅವರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ಕುಶಾಲನಗರದ ಗಣಪತಿ ದೇವಾಲಯದಿಂದ ಕೈವಾರ ತಾತಯ್ಯನವರ ಭಾವಚಿತ್ರ ಹೊತ್ತ ರಥದ ಮೆರವಣಿಗೆ ರಥಬೀದಿಯ ಮೂಲಕ ಮಾರುಕಟ್ಟೆಯ ಗಾಯತ್ರಿ ಕಲ್ಯಾಣ ಮಂಟಪದವರೆಗೆ ತೆರಳಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ ೮ ಗಂಟೆಗೆ ಬೈಲಕೊಪ್ಪದ ಕ್ಯಾಂಪ್ ರಸ್ತೆಯಿಂದ ಬೈಲಕೊಪ್ಪದ ಹಳೆಯೂರು ತನಕ ಕುಲಬಾಂಧವರೊAದಿಗೆ ರಥದ ಮೆರವಣಿಗೆ ಇರುತ್ತದೆ.

ನಂತರ ೧೨ ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಆರ್. ಬಾಬಣ್ಣ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮೈಸೂರು ಮಹಾರಾಜ ಕಾಲೇಜಿನ ಡಾ.ಎಸ್.ಕಿತ್ತೂರು ಕೃಷ್ಣಪ್ಪ, ಖ್ಯಾತ ಅಂಕಣಕಾರರಾದ ಡಾ. ಗುಬ್ಬಿಗೂಡು ರಮೇಶ್, ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಡಿ. ಸುಬ್ರಮಣಿ, ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ ಆಗಮಿಸಲಿದ್ದಾರೆ.

ಹಾಗೆಯೇ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್, ಬೈಲಕೊಪ್ಪ ಗ್ರಾ.ಪಂ. ಅಧ್ಯಕ್ಷ ರಘು, ಉಪಾಧ್ಯಕ್ಷೆ ಗೀತಾ ಸುಬ್ರಮಣ್ಯ, ಸದಸ್ಯ ಬಾಲಾಜಿ ರಘು, ಕೊಪ್ಪ ಸಹಕಾರ ಸಂಘದ ನಿರ್ದೇಶಕ ಸುಬ್ರಮಣ್ಯ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಸಮಾಜ ಸೇವಕ ಆರ್. ಸೋಮಶೇಖರ್ ಉಚಿತ ದಾಸೋಹ ನಡೆಸಲಿದ್ದಾರೆ ಎಂದು ಅಧ್ಯಕ್ಷ ಆರ್. ಬಾಬಣ್ಣ ತಿಳಿಸಿದ್ದಾರೆ.