ಮಡಿಕೇರಿ, ಮೇ ೬: ಕೌಟುಂಬಿಕ ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ತಮ್ಮನನ್ನು ಅಣ್ಣನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಭ್ಯತ್ಮಂಗಲದಲ್ಲಿ ಸಂಭವಿಸಿದೆ. ಬೆಳೆಗಾರ ಕೊಳಂಬೆ ದಿ.ಬೆಳ್ಯಪ್ಪ ಅವರ ಪುತ್ರ ವಿನುಕುಮಾರ್ (೫೨) ಎಂಬವರೇ ಮೃತಪಟ್ಟ ದುರ್ದೈವಿ.
ಪ್ರಸ್ತುತ ನಂಜರಾಯಪಟ್ಟಣದಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ವಿನುಕುಮಾರ್ ತಮಗೆ ಸೇರಿದ ಅಭ್ಯತ್ಮಂಗಲದಲ್ಲಿರುವ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಣ್ಣನಿಂದ ಗುಂಡೇಟಿಗೆ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ೧೧.೪೫ರ ವೇಳೆಗೆ ಈ ಘಟನೆ ಸಂಭವಿಸಿದೆ. ಕೆಲಸಗಾರರೊಂದಿಗೆ ತೋಟಕ್ಕೆ ತೆರಳಿದ್ದ ವಿನುಕುಮಾರ್ ತೋಟದಲ್ಲಿನ ಗೋದಾಮಿನಲ್ಲಿರುವ ಪೈಪುಗಳನ್ನು ಜೋಡಿಸುತ್ತಿದ್ದ ಸಂದರ್ಭ ಹಿಂಬದಿಯಿAದ ಗುಂಡುಹಾರಿ ಬೆನ್ನಿಗೆ ತಗುಲಿ ಮುಂಭಾಗದಿAದ ಹಾದು ಹೋಗಿದ್ದು, ವಿನು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅನಿರೀಕ್ಷಿತ ಘಟನೆಯಿಂದ ವಿಚಲಿತರಾದ ತೋಟದ ಕಾರ್ಮಿಕರು ವಿಷಯವನ್ನು ಮೃತರ ಕುಟುಂಬದವರಿಗೆ ತಿಳಿಸಿದ್ದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಡಿವೈಎಸ್ಪಿ ಸೂರಜ್, ಅಧಿಕಾರಿಗಳು, ಸಿಬ್ಬಂದಿಗಳು, ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಹೋದರನ ಬಂಧನ
ಪ್ರಕರಣಕ್ಕೆ ಸಂಬAಧಿಸಿದAತೆ ಕುಟುಂಬಸ್ಥರು ನೀಡಿದ ದೂರು ಹಾಗೂ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿದ ಪೊಲೀಸರು ಮೃತನ ಸಹೋದರ ಸುಬ್ಬಯ್ಯ (ಮಣಿ-೭೨) ಎಂಬಾತನನ್ನು ಬಂಧನಕ್ಕೊಳಪಡಿಸಿ ವಿಚಾರಣೆ ಕೈಗೊಂಡಿದ್ದಾರೆ.
ಆಸ್ತಿ ವೈಷಮ್ಯ ಕಾರಣ
ವಿನುವಿನ ಹತ್ಯೆಗೆ ಆಸ್ತಿ ವೈಷಮ್ಯವೇ ಕಾರಣ ಎನ್ನಲಾಗಿದೆ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಇದೀಗ ನಿವೃತ್ತರಾಗಿರುವ ಸುಬ್ಬಯ್ಯ ಅವರಿಗೆ ಚೆಟ್ಟಳ್ಳಿಯಲ್ಲಿ ಜಾಗವಿದ್ದು, ಆ ಜಾಗದಲ್ಲಿ ವಿನುಕುಮಾರ್ ತಾವೇ ಸ್ವತಃ ಅಣ್ಣನಿಗಾಗಿ ಮನೆ ನಿರ್ಮಾಣ ಮಾಡಿದ್ದರು. ಆ ಮನೆಯಲ್ಲಿ ಕುಟುಂಬ ಸಹಿತ ವಾಸವಿದ್ದರು. ಈ ನಡುವೆ ಈರ್ವರ ನಡುವೆ ಆಸ್ತಿ ಸಂಬAಧ ವೈಷಮ್ಯ ಉಂಟಾದ ಹಿನ್ನೆಲೆ ವಿನು ತನ್ನ ಪತ್ನಿ ಒಂಟಿಯAಗಡಿಯಲ್ಲಿ ಶುಶ್ರೂಷಕಿಯಾಗಿದ್ದಾಗ ಅವರಿಗೆ ಸಿಕ್ಕಿದ ವಸತಿಗೃಹಕ್ಕೆ ತೆರಳಿ ಅಲ್ಲಿ ವಾಸವಾಗಿದ್ದರು. ನಂತರ ನಂಜರಾಯಪಟ್ಟಣದಲ್ಲಿ ಜಾಗ ಖರೀದಿಸಿ ಅಲ್ಲೊಂದು ಮನೆ ನಿರ್ಮಿಸಿ ಕಳೆದ ಎರಡು ವರ್ಷಗಳಿಂದ ಅಲ್ಲಿಯೇ ವಾಸವಿದ್ದರು. ಅಭ್ಯತ್ಮಂಗಲದಲ್ಲಿರುವ ತೋಟಕ್ಕೆ ತೆರಳಿ ಕೆಲಸ ಮಾಡಿಸಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದರು.
ಈ ತೋಟದಲ್ಲಿ ಸುಬ್ಬಯ್ಯ ಹಾಗೂ ಮತ್ತೋರ್ವ ಸಹೋದರ ಶಿವಪ್ಪ ಅವರಿಗೂ ಪಾಲು ನೀಡಲಾಗಿದೆ.
(ಮೊದಲ ಪುಟದಿಂದ) ಇತ್ತ ಸಹೋದರ ಸುಬ್ಬಯ್ಯ ನಿವೃತ್ತಿ ಹೊಂದಿ ಚೆಟ್ಟಳ್ಳಿಗೆ ಆಗಮಿಸಿದ್ದರೂ ವೈಷಮ್ಯ ಹಾಗೆಯೇ ಮುಂದುವರಿದಿತ್ತು. ಕಳೆದ ಒಂದು ತಿಂಗಳ ಹಿಂದೆ ಈರ್ವರ ನಡುವೆ ಕಲಹ ಕೂಡ ನಡೆದಿದೆ. ಈ ವೈಷಮ್ಯ ಅತಿರೇಕಕ್ಕೆ ತಿರುಗಿ ಇಂದು ಕಿರಿಯ ಸಹೋದರ ವಿನುವಿನ ಹತ್ಯೆಯಲ್ಲಿ ಪರ್ಯಾವಸಾನಗೊಂಡಿದೆ. ಮೃತ ವಿನು ಪತ್ನಿ ಹಾಗೂ ಈರ್ವರು ಮಕ್ಕಳನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೭ರಂದು (ಇಂದು) ಸ್ವಗ್ರಾಮದಲ್ಲಿ ನೆರವೇರಲಿದೆ. ? ಸಂತೋಷ್