ಕೂಡಿಗೆ, ಮೇ ೬: ಕೂಡಿಗೆ ಗ್ರಾಮ ಪಂಚಾಯಿತಿ ಸಭೆ ನಿರ್ಣಯದಂತೆ ಕಂದಾಯ ಇಲಾಖೆ ಮುಖೇನ ಒತ್ತುವರಿಯಾಗಿದ್ದ ಹಳೆದೊಡ್ಡಿ ಜಾಗದ ಸರ್ವೆ ನಡೆಸಲಾಯಿತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯ ದೊಡ್ಡಿಯ ಜಾಗವು ಖಾಸಗಿ ವ್ಯಕ್ತಿಯ ಪಾಲಾಗುತ್ತಿದೆ ಎಂಬ ವಿಷಯದ ಬಗ್ಗೆ ಕೂಡಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳು ಸುದೀರ್ಘ ಚರ್ಚೆಗಳು ನಡೆಸಿ ಆ ಜಾಗವು ಗ್ರಾಮ ಪಂಚಾಯಿತಿ ಆಸ್ತಿಯಾಗಿ ಉಳಿಯುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸರ್ವೆಯನ್ನು ಕಂದಾಯ ಇಲಾಖೆಯ ಮುಖೇನ ನಡೆಸುವಂತೆ ಪತ್ರ ವ್ಯವಹಾರ ಮಾಡಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು.

ಗ್ರಾಮ ಪಂಚಾಯಿತಿ ನಿರ್ಣಯದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸರ್ವೆ ಇಲಾಖೆಯ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು. ಹಾಸನ ಹೆದ್ದಾರಿ ರಸ್ತೆಗೆ ಹೊಂದಿಕೊAಡAತೆ ಇರುವ ೧೧ ಸೆಂಟ್ ಜಾಗವನ್ನು ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯ ಸಹಕಾರದೊಂದಿಗೆ ನೀರಾವರಿ ಇಲಾಖೆಯ ಜಾಗವನ್ನು ಹೊರತುಪಡಿಸಿ ಗ್ರಾಮ ಪಂಚಾಯಿತಿಗೆ ಸೇರುವ ಜಾಗವನ್ನು ಗುರುತಿಸಲಾಗಿದೆ.

ಈ ಸಂದರ್ಭದಲ್ಲಿ ಸರ್ವೆ ಅಧಿಕಾರಿ ವೆಂಕಟೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನೀತ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.