ಸೋಮವಾರಪೇಟೆ, ಮೇ. ೫: ಸಮಾಜಸೇವೆಯಲ್ಲಿ ರೋಟರಿ ಮಾದರಿ ಯಾಗಿದ್ದು, ನಿಸ್ವಾರ್ಥ ಸಮಾಜಸೇವೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲರಾದ ವಿಕ್ರಮ್‌ದತ್ತ ಹೇಳಿದರು.
ಸೋಮವಾರಪೇಟೆÀ ರೋಟರಿ ಹಾಲ್‌ನಲ್ಲಿ ನಡೆದ ರೋಟರಿ ಸದಸ್ಯರ ಸಭೆಯಲ್ಲಿ ಸ್ಥಳೀಯ ರೋಟರಿ ಹಿಲ್ಸ್ನ ವಾರ್ಷಿಕ ಕಾರ್ಯಕ್ರಮಗÀಳನ್ನು ಆಲಿಸಿ ಮಾತನಾಡಿದರು. ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ಮಾತನಾಡಿ, ಸಮಾಜಸೇವೆ ಮಾಡುವುದು ರೋಟರಿ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಹಾಯಕ ಪ್ರಾಂತಪಾಲ ಡಾ. ಹರಿ., ಎ. ಶೆಟ್ಟಿ, ವಲಯ ಸೇನಾನಿ ಎಂ.ಎA. ಪ್ರಕಾಶ್ ಕುಮಾರ್, ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ನಿಯೋಜಿತ ಅಧ್ಯಕ್ಷರಾದ ವೀಣಾ ಮನೋಹರ್ ಇದ್ದರು.